10 ರೂ. ಕೋಳಿ ಮರಿಗೆ ಬಸ್ಸಲ್ಲಿ ಹಾಫ್ ಟಿಕೆಟ್, ಹೊಸನಗರದಲ್ಲಿ ಸ್ವಾರಸ್ಯಕರ ಪ್ರಕರಣ | ವಿಡಿಯೋ ನ್ಯೂಸ್

ಶಿವಮೊಗ್ಗದ ಲೈವ್.ಕಾಂ | HOSANAGARA NEWS |  1 ಜನವರಿ 2022

ಸುದ್ದಿಯ ಮುಂದಿನ ಭಾಗ ಕೆಳಗಿದೆ

KSRTC ಬಸ್ಸಿನಲ್ಲಿ ಕೋಳಿ ಮರಿ ಒಂದಕ್ಕೆ ಹಾಫ್ ಟಿಕೆಟ್ ಚಾರ್ಜ್ ಮಾಡಲಾಗಿದೆ. ಈ ಸ್ವಾರಸ್ಯಕರ ಪ್ರಸಂಗ ಹೊಸಗರದಲ್ಲಿ ವರದಿಯಾಗಿದೆ.

AVvXsEjubsOilkhgq8SzYrg6f IdYVyFT33nAzTObPTO7g2mSz1bI1BgniDqmB4x0HK8nFq9AA8jkGiIzpjJBFT6QW sE542jUkz81YOwNkKrn9VhvNWib4U auKCyVAbPTmJGqoC1JFWnN355YeV 7vd8h okX5bUuHGgBqiG1kMPmUapD4rPa2q sp LbzqQ=s926

Nanjappa Hospital Advertisement

ಹೊಸನಗರದಿಂದ ಶಿರೂರಿಗೆ ಹೊರಟಿದ್ದ KSRTC ಬಸ್ಸಿನಲ್ಲಿ ಘಟನೆ ನಡೆದಿದೆ. ಈ ಬೆಳವಣಿಗೆ ಉಳಿದ ಪ್ರಯಾಣಿಕರನ್ನು ಅವಕ್ಕಾಗಿಸಿದೆ.

ಏನಿದು ಹಾಫ್ ಟಿಕೆಟ್ ಕೇಸ್?

ಅಲೆಮಾರಿ ಕುಟುಂಬವೊಂದು ಶಿರೂರಿಗೆ ತೆರಳುತ್ತಿತ್ತು. ಈ ಕುಟುಂಬ ಶಿರಸಿಯಲ್ಲಿ ಹತ್ತು ರುಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿತ್ತು. ಖಾಸಗಿ ಬಸ್’ನಲ್ಲಿ ಹೊಸನಗರಕ್ಕೆ ಬಂದು ಅಲ್ಲಿಂದ ಶಿರೂರಿಗೆ ತೆರಳುವ KSRTC ಬಸ್ ಹತ್ತಿದ್ದರು. ಈ ಸಂದರ್ಭ KSRTC ಬಸ್ ಕಂಡಕ್ಟರ್ ಕೋಳಿಗೂ ಟಿಕೆಟ್ ಮಾಡಿಸಬೇಕು ಎಂದು ತಿಳಿಸಿದ್ದಾರೆ.

ಹತ್ತು ರುಪಾಯಿಯ ಕೋಳಿ ಮರಿಗೆ KSRTC ಬಸ್ ಕಂಡಕ್ಟರ್ 52 ರೂ. ಟಿಕೆಟ್ ಚಾರ್ಜ್ ಮಾಡಿದ್ದಾರೆ. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.

(ವಿಡಿಯೋ, ಮಾಹಿತಿ : ರವಿ ಬಿದನೂರು, ಗುಡ್ ಮಾರ್ನಿಂಗ್ ಕರ್ನಾಟಕ)

ABOUT ME NEW FINAL FINAL

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment