ಹೊಸನಗರದ ಅಬ್ಬಿ ಫಾಲ್ಸ್‌ನಲ್ಲಿ ಬೆಂಗಳೂರಿನ ಯುವಕ ನೀರುಪಾಲು, ವಿಡಿಯೋ ವೈರಲ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹೊಸನಗರ: ತಾಲೂಕಿನ ಯಡೂರು ಬಳಿಯಿರುವ ಅಬ್ಬಿ ಫಾಲ್ಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು (Tourist) ನೀರುಪಾಲಾಗಿದ್ದಾನೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗದ ಲೇಔಟ್‌ನಲ್ಲಿ ರಾತ್ರಿ 1 ಗಂಟೆಗೆ ಶಸ್ತ್ರಾಸ್ತ್ರ ಹಿಡಿದು, ಮುಖ ಮುಚ್ಚಿಕೊಂಡು ಓಡಾಡಿದ ದುಷ್ಕರ್ಮಿಗಳು

ಮೃತರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ. ರಮೇಶ್ ತಮ್ಮ ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಅಬ್ಬಿ ಫಾಲ್ಸ್‌ನಲ್ಲಿ ಫೋಟೋಗೆ ಪೋಸ್ ನೀಡುವಾಗ ಫಾಲ್ಸ್‌ಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

20 ಸೆಕೆಂಡ್‌ನ ವಿಡಿಯೋ ವೈರಲ್‌

Bangalore-Tourist-Youth-at-abbi-falls-at-yedur1

ಇನ್ನು, ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ ವೈರಲ್‌ ಆಗಿದೆ. ಫಾಲ್ಸ್‌ನ ತುದಿಯಲ್ಲಿ ಬಂಡೆಯೊಂದರ ಮೇಲೆ ರಮೇಶ್‌ ಕುಳಿತಿರುತ್ತಾರೆ. ವಿಡಿಯೋದ ಆರಂಭದಲ್ಲಿ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ನಂತರ ತಾನು ಕುಳಿತಿದ್ದ ಬಂಡೆಯಿಂದ ಕೆಳಗಿಳಿಯುತ್ತಾರೆ. ನೀರಿನ ರಭಸಕ್ಕೆ ರಮೇಶ್‌ ತೇಲಿ ಹೋಗಿದ್ದಾರೆ. ಈ ವೇಳೆ ಸ್ನೇಹಿತರು ಕೂಗಿಕೊಳ್ಳುವುದು ವಿಡಿಯೋ ರೆಕಾರ್ಡ್‌ ಆಗಿದೆ.

ಘಟನೆಯ ಬಳಿಕ ರಮೇಶ್ ಮೃತದೇಹವು ಫಾಲ್ಸ್‌ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

June-2025-Report-Shivamogga-Live-New-New.

Bangalore-Tourist-Youth-at-abbi-falls-at-yedur1

Leave a Comment