ಕಾರಿಗೆ ಗುದ್ದಿ ಟ್ರಾಕ್ಟರ್‌ ಪಲ್ಟಿ; ಅದೃಷ್ಟವಶಾತ್‌ ತಪ್ಪಿತು ದೊಡ್ಡ ಅನಾಹುತ, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಹೊಸನಗರ: ತಾಲೂಕಿನಲ್ಲಿ ಹಾದು ಹೋಗಿರುವ ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಮರಕುಟಿಕ ಕ್ರಾಸ್ ಬಳಿ ಟ್ರಾಕ್ಟರ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಸಾಗರದ ಜೆ.ಪಿ. ನಗರ ನಿವಾಸಿ ಅರುಣ್ ಕುಮಾರ್ ಅವರು ತಮ್ಮ ತಾತ ಆನಂದ್ (80), ತಾಯಿ ನಾಗರತ್ನ (51) ಹಾಗೂ ಅಜ್ಜಿ ರುಕ್ಕಿಣಿ (65) ಅವರೊಂದಿಗೆ ಕಾರಿನಲ್ಲಿ ಬೆನ್ನಟ್ಟೆಯ ದೇವಸ್ಥಾನಕ್ಕೆ ತೆರಳಿ ವಾಪಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದೆ. ನಿಟ್ಟೂರು ಕಡೆಯಿಂದ ಬಂದ ಟ್ರಾಕ್ಟರ್ ಕಾರಿಗೆ ಡಿಕ್ಕಿ ಹೊಡೆಸಿದಿದೆ. ಡಿಕ್ಕಿಯ ರಭಸಕ್ಕೆ ಟ್ರಾಕ್ಟರ್‌ನ ಚಕ್ರವು ಕಾರಿನ ಮುಂಭಾಗದ ಮೇಲೆ ಹತ್ತಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.

ACCIDENT-NEWS-GENERAL-IMAGE.

ಅಪಘಾತದಲ್ಲಿ ಕಾರಿನಲ್ಲಿದ್ದ ನಾಗರತ್ನ, ಆನಂದ್ ಹಾಗೂ ರುಕ್ಕಿಣಿ ಅವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಅರುಣ್ ಕುಮಾರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆ ಸಂಬಂಧ ಟ್ರಾಕ್ಟರ್‌ ಚಾಲಕ ಆರೀಫ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.