ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018
ಸಾಲ ಕೊಟ್ಟವರು ಮನೆಗೆ ಬಾಗಿಲಿಗೆ ಬಂದು ಬೆದರಿಸಿ, ಕೋರ್ಟ್’ನಲ್ಲಿ ಪ್ರಕರಣ ದಾಖಲಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದಿದ್ದ ಯುವಕನನ್ನು ಆತನ ಸ್ನೇಹಿತರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಹೊಸನಗರ ತಾಲೂಕಿನ ಕಲ್ಲುಕೊಪ್ಪ ಗ್ರಾಮದ ನಾಗರಾಜ್ (20) ಆತ್ಮಹತ್ಯೆಗೆ ಯತ್ನಿಸಿದಾತ. ವಿಷಯ ಕುಡಿಯುವ ಮೊದಲು ನಾಗರಾಜ್ ಡೆತ್ ನೋಟ್ ಬರೆದಿದ್ದಾನೆ.
ಏನಿದು ಘಟನೆ? ಗಲಾಟೆ ಮಾಡಿದ್ಯಾರು?
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್, ಸಾಗರದ ವ್ಯಕ್ತಿಯೊಬ್ಬರಿಂದ, 2017ರಲ್ಲಿ, 70 ಸಾವಿರ ರೂ. ಸಾಲ ಪಡದಿದ್ದ. ಇದಕ್ಕೆ ಅಸಲು ಮತ್ತು ಬಡ್ಡಿಯನ್ನು ಪಾವತಿಸಲಾಗಿದೆ. ಆದರೆ ಸಾಲ ಪಡೆಯುವ ವೇಳೆ ನೀಡಿದ್ದ ಚೆಕ್ ವಾಪಸ್ ಪಡೆಯುವ ಮೊದಲು, ಸಾಲ ಕೊಟ್ಟವರು ಮೃತಪಟ್ಟಿದ್ದಾರೆ. ಆದರೆ ಅವರ ಪತ್ನಿ, ಬಡ್ಡಿ ಬಾಕಿ ಇದ್ದು, ಅದನ್ನು ಪಾವತಿಸಬೇಕು ಎಂದು ಒತ್ತಾಯಿಸಿ, ಬ್ಲಾಂಕ್ ಚೆಕ್ ಇಟ್ಟುಕೊಂಡು ಕೇಸ್ ದಾಖಲಿಸಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೊಟ್’ನಲ್ಲಿ ಬರೆದಿದ್ದಾನೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | shivamoggalive@gmail.com




