ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 23 MAY 2024
SAGARA : ಅಡಿಕೆ ಕಳ್ಳತನ (Adike Theft) ಪ್ರಕರಣಗಳು ಹೆಚ್ಚತ್ತಿದ್ದು ಬೆಳಗಾರರಲ್ಲಿ ಆತಂಕ ಉಂಟುಮಾಡಿದೆ. ಪೊಲೀಸ್ ಇಲಾಖೆ ಇನ್ನೆರಡು ದಿನಗಳಲ್ಲಿ ಅಡಿಕೆ ಕಳ್ಳರನ್ನು ಹಿಡಿಯದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಪ್ರಾಂತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಚಂದ್ರ ಭಟ್, ಸಾಗರ, ಸೊರಬ, ಹೊಸನಗರ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಹೆಚ್ಚಾಗುತ್ತಿದೆ. ಬೆಳೆಗಾರರು ಜೀವ ಹಾಗೂ ಜೀವನ ಭದ್ರತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ದಿನಗಳಿಂದ ಕಳ್ಳತನ ಹೆಚ್ಚಿದ್ದು, ಬೆಳೆಗಾರರು ಅಡಿಕೆಯನ್ನು ಉಳಿಸಿಕೊಳ್ಳುವುದೇ ಸವಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಡಿಕೆ ಕಳ್ಳತನ ನಿಯಂತ್ರಣಕ್ಕೆ ಒತ್ತಾಯಿಸಿ ಸಂಘದಿಂದ ಸಾಗರ ಮತ್ತು ಶಿಕಾರಿಪುರ ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಆದರೂ ಸಾಗರ ತಾಲೂಕಿನ ಬಾಳಗೋಡು, ಮಿಟೆಕೊಪ್ಪ, ಬೇಳೂರು, ಮಡಸೂರು, ಸೊರಬದ ಮೂಡಗೋಡು, ನಿಸ್ರಾಣಿ ಸೇರಿದಂತೆ ವಿವಿಧೆಡೆ ಅಡಿಕೆ ಮೂಟೆಗಳನ್ನು ಕಳ್ಳತನವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ – ರಾಜ್ಯದಲ್ಲಿ ಕಡಿಮೆಯಾದ ಮಳೆ ಆರ್ಭಟ, ಮುಂಗಾರು ಕುರಿತು ಹೊರಬಿತ್ತು ಮಹತ್ವದ ಮಾಹಿತಿ
ಪ್ರಮುಖರಾದ ಈಳಿ ಶ್ರೀಧರ್, ಕೆ.ಎಸ್.ರಾಜೇಂದ್ರ, ವೆಂಕಟೇಶ್, ಎಂ.ಕೆ. ವೆಂಕಟೇಶ್, ಗಣೇಶ್, ಜಯಕುಮಾರ್, ನಾಗಾನಂದ ಹಾಜರಿದ್ದರು.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






