ಸಾಗರ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ (Bridge) ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಲೋಡ್ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್ ಆಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಭಾನುವಾರದಿಂದ ಬುಧವಾರದವರೆಗೆ ಮೊದಲ ಹಂತದ ಲೋಡ್ ಟೆಸ್ಟಿಂಗ್ ನಡೆಸಲಾಯಿತು. ಲಾರಿಗಳಲ್ಲಿ ನೂರು ಟನ್ ಲೋಡ್ ತುಂಬಿ ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಸಿಗಂದೂರು ಸೇತುವೆ ಪಾಸ್ ಆಗಿದೆ.
ಏನಿದು ಲೋಡ್ ಟೆಸ್ಟ್? ಹೇಗೆ ನಡೆಯಲಿದೆ?
ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರು ಭಾಗದಲ್ಲಿ 2.14 ಕಿ.ಮೀ ಉದ್ದದ ಸೇತುವೆ ನಿರ್ಮಿಸಲಾಗಿದೆ. ಇದು ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ. ಈ ಸೇತುವೆಯ ಕೇಬಲ್ ಭಾಗವನ್ನು ಎಕ್ಸ್‌ಟ್ರಾ ಡೋಸ್ ಪೋರ್ಷನ್, ಉಳಿದ ಭಾಗವನ್ನು ಬ್ಯಾಲೆನ್ಸ್ ಕ್ಯಾಂಟಿಲಿವರ್ ಎಂದು ಕರೆಯಲಾಗುತ್ತದೆ. ಈಗ ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದಲ್ಲಿ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ.
ಇದನ್ನೂ ಓದಿ » ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ
ಸೇತುವೆಯ ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದಲ್ಲಿ ಪ್ರತಿ ಸೆಗ್ಮೆಂಟ್‌ಗೆ 100 ಟನ್ ಭಾರ ಹೊರಿಸಲಾಗುತ್ತದೆ. ಮೊದಲಿಗೆ ಸೇತುವೆಯ ಮೊದಲ ಹಂತದಲ್ಲಿ 25 ಟನ್ ಭಾರ ಹೊರಿಸಲಾಗುತ್ತದೆ. ಅದೇ ಸ್ಥಳದಲ್ಲಿ ಪ್ರತಿ ಗಂಟೆಗೆ 25 ಟೆನ್ ಭಾರ ಹೆಚ್ಚಿಸಲಾಗುತ್ತದೆ. ನಾಲ್ಕು ಗಂಟೆಯಲ್ಲಿ 100 ಟನ್ ಭಾರ ಹೊರಿಸಲಾಗುತ್ತದೆ. ಪ್ರತಿ ಬಾರಿ ಭಾರ ಹೊರಿಸಿದಾಗಲು ಸೇತುವೆಯಲ್ಲಿ ಉಂಟಾಗುವ ವಿಚಲನವನ್ನು ವರದಿ ಮಾಡಿಕೊಳ್ಳಲಾಗುತ್ತದೆ.
ಮುಂದಿನ ವಾರ ಮತ್ತೊಂದು ಪರೀಕ್ಷೆ
ಮೊದಲ ಹಂತದ ಟೆಸ್ಟ್‌ನಲ್ಲಿ ಸಿಗಂದೂರು ಸೇತುವೆ ಪಾಸ್ ಆಗಿದೆ. ಎರಡನೇ ಹಂತದ ಲೋಡ್ ಟೆಸ್ಟ್‌ಗೆ ಅನುಮತಿ ಕೇಳಲಾಗಿದೆ. ಕೇಬಲ್ ಇರುವ ಎಕ್ಸ್‌ಟ್ರಾ ಡೋಸ್ ಭಾಗದಲ್ಲಿ ಈ ಪರೀಕ್ಷೆ ನಡೆಯಲಿದೆ. ಈಗ ನಡೆಸಿರುವಂತೆ 100 ಟನ್ ಭಾರದ ಲೋಡ್ ಇರುವ ಲಾರಿಗಳನ್ನು ತಂದು ಕೇಬಲ್ ಇರುವ ಸೇತುವೆ ಭಾಗದಲ್ಲಿ ನಿಲ್ಲಿಸಿ ಪರೀಕ್ಷಿಸಲಾಗುತ್ತದೆ. ಮುಂದಿನ ವಾರ ಈ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.
ನೂರು ವರ್ಷ ಬಾಳಿಕೆ ಬರಲಿದೆ
ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆ ಹತ್ತು ವರ್ಷ ನಿರ್ವಹಣೆ ಮಾಡಲಿದೆ. ಆಮೇಲೆ ಪ್ರತಿ ಆರು ತಿಂಗಳಿಗೆ ಒಮ್ಮೆ ನಿರ್ವಹಣೆ ಕಾರ್ಯ ನಡೆಸಬೇಕು. ನಿಯಮಿತವಾಗಿ ನಿರ್ವಹಣೆ ಮಾಡಿದರೆ 100 ವರ್ಷವಾದರು ಸೇತುವೆಗೆ ಯಾವುದೆ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯ ಇಂಜಿನಿಯರ್ ಪೀರ್ ಪಾಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
423.15 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಿಸಲಾಗಿದೆ. 2.14 ಕಿ.ಮೀ ಉದ್ದದ ಸೇತುವೆಯು 16 ಮೀಟರ್ ಅಗಲದ ದ್ವಿಪಥ ಹೊಂದಿದೆ. ಎರಡು ಕಡೆ 1.5 ಮೀಟರ್ ಅಗಲದ ಫುಟ್ ಪಾತ್ ಕೂಡ ಇದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200