ಸಾಗರ : ಏಳು ಗ್ರಾಮಗಳ (Villages) ವ್ಯಾಪ್ತಿಯನ್ನು ಮೀಸಲು ಅರಣ್ಯ ಪ್ರಸ್ತಾವನೆಯಿಂದ ಕೈ ಬಿಡುವಂತೆ ಆಗ್ರಹಿಸಿ ಆನಂದಪುರ ಹೋಬಳಿ ರೈತ ಸಂಘಟನೆಗಳ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಆನಂದಪುರ ಹೋಬಳಿಯಲ್ಲಿ ದಶಕಗಳಿಂದ ವಾಸವಾಗಿರುವ 650ಕ್ಕೂ ಹೆಚ್ಚು ಕುಟುಂಬಗಳಿಗೆ ನೊಟೀಸ್ ನೀಡಲಾಗಿದೆ. ಈ ಹಿಂದೆ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಈಗ ಈ ಜಾಗವನ್ನು ಅರಣ್ಯ ಪ್ರದೇಶ ಎಂದು ಹೇಳಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಆನಂದಪುರ ಹೋಬಳಿಯ ಹೊಸೂರು, ಮುಂಬಾಳು, ತಾವರೆಹಳ್ಳಿ, ಹೆಬ್ಬೋಡಿ, ಯಡೇಹಳ್ಳಿ, ಹೊಸಗುಂದ ಸೇರಿದಂತೆ ವಿವಿಧೆಡೆ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ರೈತರ ಸ್ವಧೀನದಲ್ಲಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಜಿಲ್ಲಾಧಿಕಾರಿ, ತಹಶೀಲ್ದಾರರು ನೀಡಿರುವ ಹಕ್ಕುಪತ್ರಕ್ಕೆ ಬೆಲೆ ಇಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಹಾಗಾದರೆ ಇನ್ಯಾರು ಕೊಡುವ ಹಕ್ಕುಪತ್ರಕ್ಕೆ ಬೆಲೆ ಇದೆ? ರೈತರು ತಮ್ಮ ಭೂಮಿಗಾಗಿ ಬೀದಿಗಿಳಿಯುವ ದುಸ್ಥಿತಿ ಎದುರಾಗಿರುವುದು ವಿಪರ್ಯಾಸ.
– ತೀ.ನಾ.ಶ್ರೀನಿವಾಸ್, ಜಿಲ್ಲಾ ಸಂಚಾಲಕ, ಮಲೆನಾಡು ಭೂ ರಹಿತ ರೈತರ ಹೋರಾಟ ವೇದಿಕೆ
ರೈತರು ದಶಕಗಳಿಂದ ಕೃಷಿ ಮಾಡುತ್ತಿದ್ದೇವೆ. ಮನೆ, ಕೊಟ್ಟಿಗೆ ಕಟ್ಟಿಕೊಂಡಿದ್ದೇವೆ. ಸರ್ಕಾರಿ ಶಾಲೆ, ಆಸ್ಪತ್ರೆಗಳು ಇಲ್ಲಿವೆ. 2012ರಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಈಗ ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಯಾರೋ ಅಧಿಕಾರಿಯ ತಪ್ಪಿಗೆ ರೈತರು ಜಮೀನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಮೀಸಲು ಅರಣ್ಯ ಘೋಷಣೆಯೇ ಅವೈಜ್ಞಾನಿಕವಾಗಿದ್ದು, ನಾಲ್ಕು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದೇವೆ.
– ಗಂಗಾಧರ್, ರೈತ
ಪ್ರತಿಭಟನೆಯಲ್ಲಿ ಪರಮೇಶ್ವರ ದೂಗೂರು, ಗಣಪತಿ, ಸಂಪೆಕಟ್ಟೆ ಶ್ರೀಕರ ಭಟ್, ದಿನೇಶ ಶಿರವಾಳ, ಜ್ಯೋತಿ ಯಡೇಹಳ್ಳಿ, ಷಣ್ಮುಖ, ರಾಜು ದೇವಾಡಿಗ, ಗಂಗಾಧರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ » ಬೆಳ್ಳಂಬೆಳಗ್ಗೆ ಶುರುವಾಗಲಿಲ್ಲ ಸಿಟಿ ಬಸ್, ಪರಿಶೀಲಿಸಿದ ಡ್ರೈವರ್ಗೆ ಕಾದಿತ್ತು ಶಾಕ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200