ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 OCTOBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SAGARA : ಗ್ರಾಮೀಣ ಭಾಗದಲ್ಲಿ ಪೊಲೀಸ್ ಗಸ್ತು (Patrol) ಹೆಚ್ಚಳ ಮಾಡಬೇಕು, ಗನ್ ಪರ್ಮಿಷನ್ ನವೀಕರಿಸಬೇಕು, ಬಂದೂಕು ತರಬೇತಿ ನೀಡಬೇಕು ಎಂದು ಒತ್ತಾಯಿಸಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಡಿವೈಎಸ್‌ಪಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಅಡಿಕೆ ಬೆಳೆಗಾರರ ಮನವಿಯೇನು?
ಸಾಗರ ಭಾಗದಲ್ಲಿ ಒಂಟಿ ಮನೆಗಳು ಹೆಚ್ಚು. ಅಡಿಕೆ ಬೆಳೆಗಾರರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಬೇಕಿದೆ. ತಮ್ಮ ಕುಟುಂಬದ ಹಿರಿಯರಿಂದ ಗನ್ ಪರವಾನಗಿಯನ್ನು ತಮಗೆ ವರ್ಗಾಯಿಸಿಕೊಡುವಂತೆ ಅರ್ಜಿ ಸಲ್ಲಿಸಿ ಹಲವು ವರ್ಷಗಳಾಗಿವೆ. ಈತನಕ ಅದು ಆಗಿಲ್ಲ. ಸಾಗರ, ಹೊಸನಗರ, ಸೊರಬ ಭಾಗದ ಬೆಳೆಗಾರರಿಗೆ ಬಂದೂಕು ತರಬೇತಿ ನೀಡಬೇಕು. ಇನ್ನು, ಗ್ರಾಮೀಣ ಭಾಗದಲ್ಲಿ ಪೊಲೀಸ್ ಗಸ್ತು (Patrol) ಹೆಚ್ಚಳ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಇದನ್ನೂ ಓದಿ- ಬಸ್ ಹತ್ತಿ ಸೀಟ್‌ನಲ್ಲಿ ಕುಳಿತು ಬ್ಯಾಗ್‌ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು
ಅಡಿಕೆ ಬೆಳೆಗಾರರ ಮನವಿಗೆ ಡಿವೈಎಸ್‌ಪಿ ಗೋಪಾಲಕೃಷ್ಣ ಟಿ.ನಾಯ್ಕ್ ಪೂರಕವಾಗಿ ಸ್ಪಂದಿಸಿದರು. ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಅನಿಲ್ ಒಡೆಯರ್, ತಿರುಮಲ ಮಾವಿನಕುಳಿ, ಚಿಪ್ಪಳಿ ಗುರುಪ್ರಸಾದ್, ಲೋಕನಾಥ್ ಬಿಳಿಸಿರಿ, ದಿನೇಶ್ ಬರದವಳ್ಳಿ, ಈಳಿ ಶ್ರೀಧರ್, ಸುಮಂತ್, ಎಂ.ಬಿ.ರಮೇಶ್, ಸಿ.ಗುರುಮೂರ್ತಿ, ಬಿ.ಟಿ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.