ಸಾಗರ : ಸಿಗಂದೂರು ಲಾಂಚ್ಗೆ (Launch) ವಾಹನಗಳನ್ನು ಬಿಡುವ ವಿಚಾರದಲ್ಲಿ ಜಗಳವಾಗಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ನೇಮಿಸಿರುವ ಟಿಕೆಟ್ ಕಲೆಕ್ಟರ್ ಸೇರಿ ಹಲವರ ವಿರುದ್ಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೇಮಕವಾಗಿರುವ ಟಿಕೆಟ್ ಕಲೆಕ್ಟರ್ ಮತ್ತು 10-15 ಸಹಚರರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಗಲಾಟೆ ಆಗಿದ್ದೇಕೆ?
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಪುರದ ನಿವಾಸಿ ಪ್ರಣತಿ, ತಂದೆ ಪ್ರಸನ್ನ, ತಾಯಿ ಪ್ರಭಾ, ಸಹೋದರ ಪವನ್ಕುಮಾರ್ ಮತ್ತು ಮಾವನ ಮಗ ವಿನಾಯಕ್ ಪ್ರಸಾದ್ ಎಂಬುವರು ಸಂಬಂಧಿಕರ ಮದುವೆಗೆಂದು ಸಾಗರಕ್ಕೆ ಬಂದಿದ್ದರು. ಅಲ್ಲಿಂದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಓಮ್ನಿ ಕಾರಿನಲ್ಲಿ ಹೊರಟಿದ್ದರು. ವಾಹನಗಳನ್ನು ಸರದಿಯಲ್ಲಿ ಲಾಂಚ್ಗೆ ಬಿಡುವ ವಿಚಾರದಲ್ಲಿ ಟಿಕೆಟ್ ಕಲೆಕ್ಟರ್ ಮತ್ತು ಕಾರಿನಲ್ಲಿದ್ದ ವಿನಯ್ ಪ್ರಸಾದ್ ಮಧ್ಯೆ ವಾಗ್ವಾದ ನಡೆದಿತ್ತು. ಬಳಿಕ ದೇವಸ್ಥಾನಕ್ಕೆ ತೆರಳಲು ಕುಟುಂಬದವರು ಲಾಂಚ್ಗೆ ಓಮ್ನಿ ಕಾರು ಹಾಕಿದ್ದರು.

ಗುಂಪು ಕಟ್ಟಿಕೊಂಡು ಬಂದು ಹಲ್ಲೆ
ಬಳಿಕ ಗುಂಪು ಕಟ್ಟಿಕೊಂಡು ಬಂದ ಟಿಕೆಟ್ ಕಲೆಕ್ಟರ್, ಓಮ್ನಿಯಲ್ಲಿದ್ದ ವಿನಾಯಕ, ಪವನ್ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಓಮ್ನಿಗೆ ಹಾನಿ ಮಾಡಿದ್ದಾರೆ. ಮಹಿಳೆಯರು ಎಂಬುದನ್ನು ಲೆಕ್ಕಿಸದೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದೂರಲಾಗಿದೆ.

ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಸಾಗರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಘಟನೆ ಸಂಬಂಧ ಕಾರ್ಗಲ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ತುಂಗಾ ಚಾನಲ್ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನಾಪತ್ತೆ, ಶೋಧ ಕಾರ್ಯಾಚರಣೆ
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು





