ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 MARCH 2023
TALAGUPPA : ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬ್ಯಾಗನ್ನು ರೈಲ್ವೆ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ. ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ (Bag) ಸಿಕ್ಕಿತ್ತು. ಇದನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಜಯರಾಂ ಅವರು ವಶಕ್ಕೆ ಪಡೆದಿದ್ದರು.
ಬ್ಯಾಗಿನಲ್ಲಿ (Bag) ಪಾಸ್ ಪೋರ್ಟ್, ಡೆಬಿಟ್ ಕಾರ್ಡ್, ಬೆಡ್ ಶೀಟ್, ಬಟ್ಟೆಗಳು ಇದ್ದವು. ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಈ ಬ್ಯಾಗನ್ನು ಮರೆತು ಹೋಗಿದ್ದರು. ವಾರಸುದಾರರನ್ನು ಪತ್ತೆ ಹಚ್ಚಿದ ರೈಲ್ವೆ ಪೊಲೀಸರು, ಬ್ಯಾಗನ್ನು ಹಸ್ತಾಂತರ ಮಾಡಿದ್ದಾರೆ.
ಪ್ರಯಾಣಿಕರು ಬಿಟ್ಟು ಹೋಗಿರುವ ಬ್ಯಾಗು, ವಸ್ತುಗಳನ್ನು ಅವರಿಗೆ ಮರಳಿಸಲು ರೈಲ್ವೆ ಇಲಾಖೆ ಪೊಲೀಸರು ಆಪರೇಷನ್ ಅಮಾನತ್ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾರೆ. ವಸ್ತುಗಳು ನಿಜವಾದ ಮಾಲೀಕರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ – ವಿಐಎಸ್ಎಲ್ ಕುರಿತು ಕಾರ್ಮಿಕರ ನಿಯೋಗಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಭರವಸೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422