ತೋಟಕ್ಕೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ, ಗಂಭೀರ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 MAY 2023

SAGARA : ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ (Bear Attack) ನಡೆಸಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

karadi-attack-on-a-person-in-Sagara

ತಿಮ್ಮಾನಾಯ್ಕ್‌ (88) ಎಂಬುವವರು ಕರಡಿ ದಾಳಿಗೆ (Bear Attack) ಗಾಯಗೊಂಡಿದ್ದಾರೆ. ತೋಟದಲ್ಲಿ ಕಟ್ಟಿಗೆ ತರಲು ಕಾಡು ದಾರಿಯಲ್ಲಿ ತೆರಳುತ್ತಿದ್ದಾಗ ಕರಡಿ ದಾಳಿ ನಡೆಸಿದೆ. ಸಾಗರ ತಾಲೂಕು ಜೋಗ ಹೆನ್ನಿ ವಡನ್‌ಬೈಲ್‌ ಬಳಿ ಘಟನೆ ಸಂಭವಿಸಿದೆ.

ಇದನ್ನೂ ಓದಿ – ಟಿಪ್ಪರ್‌ ಲಾರಿ ದಾಖಲೆ ಪರಿಶೀಲಿಸಿ ದಂಗಾದ ಸಾರಿಗೆ ಅಧಿಕಾರಿಗಳು, ಮಾಲೀಕನಿಗೆ ಲಕ್ಷ ಲಕ್ಷ ದಂಡ, ಕಾರಣವೇನು?

ತಿಮ್ಮಾನಾಯ್ಕ್‌ ಮುಖ, ಕಣ್ಣು, ಮೈಕೈಗೆ ಗಂಭೀರ ಗಾಯವಾಗಿದೆ. ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment