ಶಿವಮೊಗ್ಗ ಲೈವ್
ಸಾಗರ: ಆನಂದಪುರ–ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಸಮೀಪ ಎರಡು ಬೈಕ್ಗಳು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾರೆ.
ಆಟೋ ಚಾಲಕ ಮೊಹಮ್ಮದ್ ಸಿದ್ದಿಕ್ (26) ಮೃತ ದುರ್ದೈವಿ. ಮತ್ತೊಬ್ಬ ಸವಾರ ತೀರ್ಥೇಶ್ (25) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೇಗಾಯ್ತು ಅಪಘಾತ?
ಆನಂದಪುರ ಕಡೆಯಿಂದ ಗೌತಮಪುರದ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್ ಬೈಕ್ ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಮುಖ್ಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಸಿದ್ದಿಕ್ ಬೈಕ್ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತ ಸಿದ್ದಿಕ್ ಆಟೋರಿಕ್ಷಾ ಚಲಾಯಿಸುತ್ತಿದ್ದರು. ಕುಟುಂಬಕ್ಕೆ ಆಸರೆಯಾಗಿದ್ದರು. ಘಟನೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.