ಮಹಿಳೆಯರಿದ್ದ ಟೂರಿಸ್ಟ್‌ ಬಸ್‌ ಪಲ್ಟಿ, ಅದೃಷ್ಟವಶಾತ್‌ ತಪ್ಪಿದ ಭಾರಿ ದುರಂತ

ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಟೂರಿಸ್ಟ್‌ ಬಸ್‌ ರಸ್ತೆ ಬದಿಯ ಮನೆ ಮೇಲೆ ಪಲ್ಟಿಯಾಗಿದೆ. ಸಾಗರ ತಾಲ್ಲೂಕಿನ ಎಸ್‌.ಎಸ್‌.ಬೋಗ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಗ್ರಾಮ ಸಮೀಪದ ಹಲಕೊಟ್ಟಿಗೆ ಕ್ರಾಸ್‌ನಲ್ಲಿ ಘಟನೆ ನಡೆದಿದೆ.

ಹಲಕೊಟ್ಟಿಗೆ ಕ್ರಾಸ್‌ ಬಳಿ ಬಸ್‌ನ ಬ್ರೇಕ್‌ ಫೇಲ್‌ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಪಕ್ಕದ ಮನೆಯ ಮೇಲೆ ಉರುಳಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಆರೇಳು ಮಹಿಳೆಯರು ಗಾಯಗೊಂಡಿದ್ದಾರೆ. ಮನೆಗು ಹಾನಿಯಾಗಿದೆ.

Tour-Bus-Mishap-near-Nitturu-Hosakoppa-at-Hosanagara

ದಾವಣಗೆರೆಯ ಮಹಿಳೆಯರಿದ್ದ ಬಸ್

ದಾವಣಗೆರೆಯ ನಿಟ್ಟುವಳ್ಳಿಯ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 24 ಮಹಿಳೆಯರು ಪ್ರವಾಸಕ್ಕೆ ಬಂದಿದ್ದರು. ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳ ದರ್ಶನ ಪಡೆದು ಬಳೆ ಪದ್ಮಾವತಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯರಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯ ನಡೆಸಿದರು. ಕಾರ್ಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.