ಸಹಕಾರಿ ಬ್ಯಾಂಕ್‌ ಬೀಗ ಒಡೆದು 1.70 ಲಕ್ಷ ರೂ. ಕಳ್ಳತನ, ದಾಖಲೆಗಳು ಚೆಲ್ಲಾಪಿಲ್ಲಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 DECEMBER 2023

BYKODU : ಸಹಕಾರಿ ಬ್ಯಾಂಕ್‌ನ ಬೀಗ ಒಡೆದು 1.70 ಲಕ್ಷ ರೂ. ನಗದು ಕಳ್ಳತನ ಮಾಡಲಾಗಿದೆ. ಬ್ಯಾಕೋಡು ಸಮೀಪದ ಸಸಿಗೊಳ್ಳಿಯ ನಾರಾಯಣ ಗುರು ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿರುವ ಶಂಕೆ ಇದೆ. ಕಳ್ಳರು ಬ್ಯಾಂಕಿನಲ್ಲಿದ್ದ ದಾಖಲಾತಿ ಚಲ್ಲಾಪಿಲ್ಲಿ ಮಾಡಿದ್ದಾರೆ.

ಸೋಮವಾರ ಸಿಬ್ಬಂದಿ ಆಗಮಿಸಿದಾಗ ಬ್ಯಾಂಕ್‌ನಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಗಲ್ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲಿಸಿದರು. ಬ್ಯಾಕೋಡು ಭಾಗದಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದೆ. ಎರಡು ದಿನದ ಹಿಂದೆ ಕುದರೂರು ಶಾಲೆಯ ಅಡುಗೆ  ಮನೆಯ ಬೀಗ ಮುರಿದು ಅಡುಗೆ ಎಣ್ಣೆ, ಬೇಳೆ, ಅಕ್ಕಿ ಕಳ್ಳತನ ಮಾಡಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಎದೆ ಹಾಲು ಬ್ಯಾಂಕ್‌, ಮಧ್ಯ ಕರ್ನಾಟಕದಲ್ಲಿ ಇದೆ ಮೊದಲು, ಏನಿದು? ಪ್ರಯೋಜನವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment