ಶಿವಮೊಗ್ಗ ಲೈವ್.ಕಾಂ | ANANDAPURAM NEWS | 14 JUNE 2021
‘100 ನಾಟೌಟ್’ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬೈಕ್‍ಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾರೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಾಗರ ತಾಲೂಕು ಆನಂದಪುರದಲ್ಲಿ ಇವತ್ತು ‘100 ನಾಟೌಟ್’ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಬೈಕ್‍ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಯನ್ನು ಬೈಕ್ ಮೇಲೆ ಇರಿಸಿ ಮೆರವಣಿಗೆ ನಡೆಸಿದರು. ಬಳಿಕ ನಡುರಸ್ತೆಯಲ್ಲಿ ಬೈಕ್ ಉರುಳಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕೋಗೋಡು ತಿಮ್ಮಪ್ಪ ಆಕ್ರೋಶ
ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕರೋನ ಸಂಕಷ್ಟ ಕಾಲದಲ್ಲಿ ಮೋದಿ ಅವರು ಸುಲುಗೆ ಮಾಡುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರ ವಿರುದ್ಧ ನಾವೆಲ್ಲ ಧ್ವನಿ ಎತ್ತಲೆ ಬೇಕಿದೆ. ದೇಶದಲ್ಲಿ ಜನರು ಬಾಯಿ ಬಿಡದಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಬ್ ಕೆ ಸಾಥ್, ಅಚ್ಚೇ ದಿನ್ ಎಂದು ಹೇಳುವ ಮೋದಿ, ಪೆಟ್ರೋಲ್, ಡಿಸೇಲ್ ದರವನ್ನು ಯಾವ ಕಾರಣಕ್ಕೆ ಏರಿಕೆ ಮಾಡಿದರು ಎಂದು ತಿಳಿಸಬೇಕು ಎಂದು ಸಾವಾಲು ಹಾಕಿದರು.
ಬೈಕ್ ಸುಡುವ ವಿಡಿಯೋ ವರದಿ ಇಲ್ಲಿದೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
