ಸಾಗರದ ಮಾರ್ಕೆಟ್‌ ರಸ್ತೆ ವಿಸ್ತರಣೆ, ಎಂಎಲ್‌ಎ, ಡಿಸಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ, ಜ.17ರಂದು ಮಹತ್ವದ ಸಭೆ

SHIVAMOGGA LIVE NEWS | 7 JANUARY 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

SAGARA : ಮಾರ್ಕೆಟ್ ರಸ್ತೆ ನಿವಾಸಿಗಳು ತಮ್ಮ ಕಟ್ಟಡ ತೆರವುಗೊಳಿಸುವ ಸಂಬಂಧ ತಾಲ್ಲೂಕು ಆಡಳಿತದ ಎದುರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುತ್ತದೆ. ಇತರ ಬೇಡಿಕೆಗಳಿಗೆ ಕೂಡ ಆಡಳಿತ ಸಹಾನುಭೂತಿಯಿಂದ ಸ್ಪಂದಿಸಲಿದೆ. ಸ್ಥಳೀಯರ ನೆರವಿನೊಂದಿಗೆ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಾಗರದ ಮಾರ್ಕೆಟ್ ರಸ್ತೆ ವಿಸ್ತರಣೆ ಕಾರ್ಯವನ್ನು ಪೂರ್ಣಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಇತರ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

Shivamogga Live Promotion

ಮಾರ್ಕೆಟ್ ರಸ್ತೆಯ ವಿಸ್ತರಣೆಗಾಗಿ ಕೆಲವರು ಈಗಾಗಲೆ ಕಟ್ಟಡಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿ ರಸ್ತೆಯ ಒಂದು ಭಾಗ ಮಾತ್ರ ವಿಸ್ತರಣೆಯಾಗಿದೆ. ಉಳಿದವರು ಕಟ್ಟಡಗಳನ್ನು ತೆರವುಗೊಳಿಸಿದಲ್ಲಿ ವಿಸ್ತರಣೆ ಕಾರ್ಯ ಪೂರ್ಣಗೊಳ್ಳಲಿದೆ. ಊರಿನ ಸೌಂದರ್ಯ ಹೆಚ್ಚುವ ಜೊತೆಗೆ ವ್ಯಾಪಾರ ವಹಿವಾಟಿಗು ಅನುಕೂಲವಾಗುತ್ತದೆ. ಜ.17ರಂದು ತಮ್ಮ ಕಚೇರಿಯಲ್ಲಿ ರಸ್ತೆ ವಿಸ್ತರಣೆ ಸಂಬಂಧ ಸಭೆ ಆಯೋಜಿಸಲಾಗಿದೆ ಎಂದರು.

ಇದನ್ನೂ ಓದಿ – ಹೆದ್ದಾರಿಯಲ್ಲಿ ಮೂವರಿಗೆ ಅಪ್ಪಳಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಉಪವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ಲೋಕೋಪಯೋಗಿ ಇಲಾಖೆ ಅಭಿಯಂತರ ಮಂಜುನಾಥ್, ಸ್ಥಳೀಯರು ಇದ್ದರು.  

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment