ಶರಾವತಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಡಾಕ್ಟರ್‌ ಸಾವು, ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ಸಾಗರ: ತಾಲೂಕಿನ ಹಕ್ರೆ ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶು ವೈದ್ಯಾಧಿಕಾರಿಯೊಬ್ಬರು (Doctor) ಮೃತಪಟ್ಟಿದ್ದಾರೆ. ಮಾಸೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸುನಿಲ್ (38) ಮೃತರು.

ಭಾನುವಾರ ರಜೆಯ ಹಿನ್ನೆಲೆ ಕುಟುಂಬದವರ ಜೊತೆಗೆ ಹಕ್ರೆ ಹಿನ್ನೀರು ಪ್ರದೇಶಕ್ಕೆ ತೆರಳಿದ್ದರು. ಹಿನ್ನೀರು ಭಾಗದಲ್ಲಿ ಈಜಲು ಇಳಿದಾಗ ಡಾ. ಸುನಿಲ್‌ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತಕ್ಷಣ ಸ್ಥಳೀಯರಿಗೆ ಮಾಹಿತಿ ತಿಳಿಸಲಾಗಿತ್ತು. ಸ್ಥಳಕ್ಕೆ ಸಾಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಈಜುಗಾರರ ಸಹಾಯದೊಂದಿಗೆ ನಾಪತ್ತೆಯಾದ ವೈದ್ಯರಿಗಾಗಿ ತೀವ್ರ ಹುಡುಕಾಟ ನಡೆಸಿದರು. ಮೃತದೇಹ ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ » ಸೂಡೂರು ಬಳಿ ಅಪಘಾತ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸಾವು, ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment