ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 14 JANUARY 2023
SAGARA : ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ನಕಲಿ ಸಹಿ (signature), ಸೀಲು ಬಳಸಿ, ನಕಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿ, ಮಂಗಳೂರು ವಿದ್ಯುತ್ ಕಂಪನಿಗೆ (ಮೆಸ್ಕಾಂ) ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಗರ ತಾಲೂಕು ಹೆಗ್ಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಸೌಮ್ಯಾ ಅವರ ಸಹಿ (signature) ನಕಲು ಮಾಡಲಾಗಿದೆ. ಅವರ ಹೆಸರಿನಲ್ಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿರುವ ಆರೋಪದ ಹಿನ್ನೆಲೆ ಸವಿತಾ ಎಂಬುವವರ ವಿರುದ್ಧ ದೂರು ನೀಡಲಾಗಿದೆ.
ನಕಲಿ ವಿಚಾರ ಗೊತ್ತಾಗಿದ್ದು ಹೇಗೆ?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ನಿರಾಪೇಕ್ಷಣಾ ಪತ್ರ ನೀಡುವ ಜವಾಬ್ದಾರಿಯು ಪಿಡಿಒಗೆ ಇರಲಿದೆ. ಸವಿತಾ ಎಂಬುವವರು ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಮೆಸ್ಕಾಂ ಸಾಗರ ಕಚೇರಿಗೆ ನಿರಾಪೇಕ್ಷಣಾ ಪತ್ರ ಸಲ್ಲಿಸಿದ್ದರು. 2022ರ ಅಕ್ಟೋಬರ್ 3ರಂದು ನಿರಾಪೇಕ್ಷಣಾ ಪತ್ರ ವಿತರಣೆ ಮಾಡಿರುವುದಾಗಿ ಲೆಟರ್ ಹೆಡ್ ನಲ್ಲಿ ನಮೂದಿಸಲಾಗಿತ್ತು.

ದೂರು ಅರ್ಜಿಯೊಂದರ ಪರಿಶೀಲನೆ ವೇಳೆ ಸವಿತಾ ಅವರು ಮೆಸ್ಕಾಂಗೆ ಸಲ್ಲಿಸಿದ್ದ ನಿರಾಪೇಕ್ಷಣಾ ಪತ್ರದ ಕುರಿತು ಅನುಮಾನ ವ್ಯಕ್ತವಾಗಿದೆ. ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಗ್ರಾಮ ಪಂಚಾಯಿತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಬಳಸಿ, ಪಿಡಿಒ ನಕಲಿ ಸಹಿ ಮತ್ತು ಸೀಲ್ ಉಪಯೋಗಿಸಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿ ಮೆಸ್ಕಾಂಗೆ ಸಲ್ಲಿಸಿರುವುದು ಗೊತ್ತಾಗಿದೆ.
ಇದನ್ನೂ ಓದಿ – ಹಾಡಹಗಲೆ ಜಡೆ ಗ್ರಾಮದ ಮಠದಲ್ಲಿ ಹುಂಡಿ ಕಳ್ಳತನ
ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


CLICK HERE TO JOIN SHIVAMOGGA LIVE WHATSAPP GROUP



