ಶಿವಮೊಗ್ಗ ಲೈವ್.ಕಾಂ | SAGARA NEWS | 7 ಜುಲೈ 2021
ಯುವಕರ ಸಮಯ ಪ್ರಜ್ಞೆಯಿಂದಾಗಿ ಸಾಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ ಯುವಕರು, ಅನಿಲ ಸೋರಿಕೆಯನ್ನು ತಡೆದಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಘಟನೆ?
ಸಾಗರ ಪಟ್ಟಣದ ಎಸ್.ಎನ್.ನಗರದ ಬಾಳೆಕಾಯಿ ನಾಗರಾಜ್ ಅವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದೆ. ಇದರಿಂದ ಮನೆಯಲ್ಲಿದ್ದವರು ಆತಂಕಕ್ಕೀಡಾಗಿದ್ದರು. ಅಕ್ಕಪಕ್ಕದ ಮನೆಗಳಲ್ಲೂ ಭೀತಿ ಸೃಷ್ಟಿಯಾಗಿತ್ತು.
ವಿಚಾರ ತಿಳಿಯುತ್ತಿದ್ದಂತೆ ನಾಗರಾಜ್, ವಿನೋದ್ ರಾಜ್, ಪ್ರಕಾಶ್, ರವಿ, ಸ್ಥಳೀಯ ಬೀಟ್ ಪೊಲೀಸ್ ಸುರೇಂದ್ರ ಅವರು ಮನೆಯವರನ್ನೆಲ್ಲ ಸುರಕ್ಷಿತವಾಗಿ ಹೊರಗೆ ಕರೆದೊಯ್ದಿದ್ದಾರೆ. ರವಿ ಅವರು ಗ್ಯಾಸ್ ಮತ್ತಷ್ಟು ಲೀಕ್ ಆಗುವುದನ್ನು ತಪ್ಪಿಸಿದ್ದಾರೆ. ನೆರೆಹೊರೆಯವರನ್ನು ಸುರಕ್ಷಿತಗೊಳಿಸಿದ್ದಾರೆ.
ಈ ವೇಳೆಗಾಗಲೆ ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯುವಕರ ಸಮಯ ಪ್ರಜ್ಞೆಗೆ ಶಹಬ್ಬಾಸ್ ತಿಳಿಸಿದ್ದಾರೆ.
ಫೋಟೊ, ವರದಿ : ಸುದ್ದಿಮನೆ, ಸಾಗರ
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200