ಸಾಗರ ಮಾರಿಕಾಂಬ ಜಾತ್ರೆ ಮುಗಿಸಿ ಬಸ್‌ ಹತ್ತಿದ ಮಹಿಳೆ, ಸ್ವಲ್ಪ ಹೊತ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ಸಾಗರ: ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್ ಹತ್ತುವ ಸಂದರ್ಭ ಮಹಿಳೆಯೊಬ್ಬರ ಬ್ಯಾಗ್‌ನಿಂದ ಸುಮಾರು 12 ಗ್ರಾಂ ತೂಕದ ಬಂಗಾರದ ಚೈನ್ (gold chain) ಕಳುವಾಗಿರುವ ಘಟನೆ ನಡೆದಿದೆ.

Shivamogga-Live-Number-1-Website

ಸೊರಬ ತಾಲೂಕಿನ ಜಡೆ ಗ್ರಾಮದ ಜಯಮ್ಮ ಎಂಬುವವರು ಸಾಗರದ ಜಂಬಗಾರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮಾರಿಕಾಂಬ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿ ವಾಪಸ್ ಊರಿಗೆ ಹೋಗಲು ಸಾಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭ ಸುಮಾರು 12 ಗ್ರಾಂ ತೂಕದ ಬಂಗಾರದ ಗಣಪತಿ ಡಾಲರ್ ಇದ್ದ ಚೈನ್‌ ಅನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.

ಇದನ್ನೂ ಓದಿ – ಇನ್ಮುಂದೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಮೊಗ್ಗ ಪೊಲೀಸ್‌, ಏನಿದು?

ಸೊರಬ – ಹಾನಗಲ್ ಮಾರ್ಗದ ಬಸ್ ಬಂದಾಗ ರಶ್ ಹೆಚ್ಚಾಗಿತ್ತು. ಜಯಮ್ಮ ಅವರು ನೂಕುನುಗ್ಗಲಿನಲ್ಲಿ ಬಸ್ಸಿನ ಹಿಂದಿನ ಬಾಗಿಲಿನಿಂದ ಹತ್ತಿ ಸೀಟಿನಲ್ಲಿ ಕುಳಿತಿದ್ದರು. ಬಳಿಕ ಬ್ಯಾಗ್ ಪರಿಶೀಲಿಸಿದಾಗ ಬಂಗಾರದ ಚೈನ್ ನಾಪತ್ತೆಯಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

KSRTC-Bus-General-Image-Shimoga-Bangalore

ಬಂಗಾರದ ಚೈನ್ ಸುಮಾರು 10 ವರ್ಷ ಹಿಂದೆ ಮಾಡಿಸಿದ್ದಾಗಿದ್ದು, ಅಂದಿನ ಮೌಲ್ಯ ಸುಮಾರು ₹48,000 ಎಂದು ತಿಳಿಸಲಾಗಿದೆ. ಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 12, 2026

Leave a Comment