ಸಾಗರ ತಾಲೂಕಿನಲ್ಲಿ ಆಗಸ್ಟ್‌ 3ರಂದು ರಜೆ, ಯಾರಿಗೆಲ್ಲ ರಜೆ ಅನ್ವಯವಾಗಲಿದೆ?

ಸಾಗರ: ತಾಲೂಕಿನಲ್ಲಿ ಭಾರಿ ಮಳೆ ಮುಂದುವರೆದ ಹಿನ್ನೆಲೆ ಆಗಸ್ಟ್‌ 3ರಂದು ರಜೆ ಘೋಷಿಸಿ ತಹಶೀಲ್ದಾರ್‌ ಡಾ. ಪ್ರತಿಭಾ.ಆರ್‌ ಆದೇಶಿಸಿದ್ದಾರೆ. ಸಾಗರ ತಾಲೂಕಿನ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿ ಪೂರ್ವ, ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೋಷಣ ಮಾಡಲಾಗಿದೆ.

ಇನ್ನು, ಸಾಗರ ತಾಲೂಕಿನ ವಿವಿಧೆಡೆ ಕಳೆದ ಮೂರು ದಿನದಿಂದ ಭಾರಿ ಮಳೆಯಾಗುತ್ತಿದೆ. ಸೋಮವಾರವು ಮಳೆ ಮುಂದುವರೆಯುವ ಸಾಧ್ಯತೆ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.

night-rain-in-shimoga