ಸಾಗರ ಮಾರಿಕಾಂಬ ಜಾತ್ರೆ ಮೆರವಣಿಗೆ ಮುಗಿದ ಮೇಲೆ ವೃದ್ಧನಿಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಮೆರವಣಿಗೆಯ ಸಂದರ್ಭ ಜನದಟ್ಟಣೆಯಲ್ಲಿ ಕಳ್ಳರು, ವೃದ್ಧರೊಬ್ಬರ ಕೊರಳಿನಲ್ಲಿದ್ದ ₹1.05 ಲಕ್ಷ ಮೌಲ್ಯದ ಚಿನ್ನದ ಸರ (gold chain) ದೋಚಿದ್ದಾರೆ. ಜೆ.ಸಿ. ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಸಂಗಮೇಶ್ವರ ರಸ್ತೆ ನಿವಾಸಿ ಶ್ರೀಕಾಂತ ವಜ್ರ ಶೇಠ್ ಅವರು ಚಿನ್ನದ ಸರ ಕಳೆದುಕೊಂಡವರು. ಫೆಬ್ರವರಿ 12ರ ಮಧ್ಯರಾತ್ರಿ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಜೆ.ಸಿ. ರಸ್ತೆಯ ದೇವಸ್ಥಾನದ ಬಳಿ ನಿಂತಿದ್ದ ಶ್ರೀಕಾಂತ ಅವರ ಕೊರಳಿನಲ್ಲಿದ್ದ ಹವಳದ ಪದಕ ಇರುವ ₹1,05,000 ಮೌಲ್ಯದ 19 ಗ್ರಾಂ ತೂಕದ ಬಂಗಾರದ ಚೈನ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

sagara graphics

ಸಾಗರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾಕು ನಾಯಿಗಳ ಜಗಳ, ಕೈ ಕೈ ಮಿಲಾಯಿಸಿದ ಮಾಲೀಕರು, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment