ಸಿಗಂದೂರು ಸೇತುವೆ, ಸಾಗರದಿಂದ ಉಡುಪಿ, ಮಂಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ಸಾಗರ: ಸಿಗಂದೂರು ಸೇತುವೆ ಉದ್ಘಾಟನೆ ಬಳಿಕ ಸಾಗರದಿಂದ ಆವಿನಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ಸಾರಿಗೆ ಬಸ್‌ (Bus) ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್‌.ಕೆ.ಅಣ್ಣಪ್ಪ ಒತ್ತಾಯಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜುಲೈ 14ರಂದು ಸಿಗಂದೂರು ಸೇತುವೆ ಉದ್ಘಾಟನೆ ಆಗಲಿದೆ. ವಾಹನಗಳ ಸಂಚಾರ ಸರಾಗವಾಗಲಿದೆ. ಹಾಗಾಗಿ ಆವಿನಹಳ್ಳಿ ಮೂಲಕ ಸಾಗರದಿಂದ ಉಡುಪಿಗೆ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Sigandur-Bridge-work-photo

ಆವಿನಹಳ್ಳಿ, ಹೊಳೆಬಾಗಿಲು, ಸಿಗಂದೂರು, ತುಮರಿ, ಕೊಲ್ಲೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಿದರೆ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗಿ ಬರುವವರು ಸೇರಿದಂತೆ ವಿವಿಧ ಕೆಲಸಗಳಿಗೆ ಓಡಾಡುವವರಿಗೆ ಅನುಕೂಲವಾಗಲಿದೆ. ಇದು ಹತ್ತಿರದ ಮಾರ್ಗವಾದ್ದರಿಂದ ಸಮಯವು ಉಳಿತಾಯವಾಗಲಿದೆ ಎಂದು ಅಣ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ನಿಲ್ದಾಣದಲ್ಲಿಯೇ ಸಿಟಿ ಬಸ್‌ ಕಂಡಕ್ಟರ್‌ಗಳ ಮಧ್ಯೆ ಕಿರಿಕ್‌, ಕೈ ಕೈ ಮಿಲಾಯಿಸಿದ ನಿರ್ವಾಹಕರು

June-2025-Report-Shivamogga-Live

Leave a Comment