ಭಾರಿ ಮಳೆಗೆ ಸಾಗರದಲ್ಲಿ ಧರೆ ಕುಸಿತ, ಎರಡು ಕಡೆ ಮನೆಗಳಿಗೆ ಹಾನಿ

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಭಾರಿ ಮಳೆಗೆ ಸಾಗರ ತಾಲೂಕಿನಲ್ಲಿ ಮನೆಯ ಗೋಡೆ ಮತ್ತು ಧರೆ ಕುಸಿದ ವರದಿಯಾಗಿದೆ.

ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹದ ಗ್ರಾಮದಪ್ಪಿ ಭಾರಿ ಮಳೆಗೆ ತೋಟದ ಮೇಲಿನ ಧರೆ ಕುಸಿದಿದೆ.

Shivamogga Live Promotion

ಅರೆಹದ ಗ್ರಾಮದ ಸರ್ವೇ ನಂ. 72ರಲ್ಲಿ ಎಂ.ಆರ್.ಸುಬ್ಬರಾವ್ ಎಂಬುವವರಿಗೆ ಸೇರಿದ ಅಡಕೆ ತೋಟದ ಮೇಲ್ಬಾಗದ ಸುಮಾರು 30 ಅಡಿ ಎತ್ತರದ ಧರೆ ಕುಸಿದಿದ್ದು. ಅಡಕೆ ಮರಗಳು ಹಾನಿಯಾಗಿವೆ. ಸುಮಾರು 35 ಅಡಿಯಷ್ಟು ಅಗಲ ಧರೆ ಕುಸಿದ ಪರಿಣಾಮ ಮೇಲ್ಬಾಗದ ಸಂಪರ್ಕ ರಸ್ತೆ ಸಹ ಕಡಿತಗೊಂಡಿದೆ.

ಮನೆ ಗೋಡೆ ಕುಸಿತ

ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಪ್ರೇಮನಾಥ್, ಸದಸ್ಯರಾದ ಎ. ಆರ್.ಮಹಾಬಲೇಶ್ವರ್, ಪಿಡಿಓ ರಮ್ಯಾ, ಗ್ರಾಮಸ್ಥರಾದ ಸುಬ್ಬರಾವ್, ಗಣಪತಿ, ಅಣ್ಣಪ್ಪಭೇಟಿ ನೀಡಿದ್ದರು.

ಸಾಗರ ಗ್ರಾಮಾಂತರದಲ್ಲಿ 2 ಕಡೆ ಮನೆಗಳಿಗೆ ಹಾನಿಯಾಗಿದೆ. ಭೀಮನೇರಿ ಗ್ರಾಮ ಪಂಚಾಯಿತಿಯ ಸೂರನಗದ್ದೆಯಲ್ಲಿ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ಬೆಳ್ಳಣ್ಣೆ ಗ್ರಾಮದ ಗಿಳಿಗಾರು ವಾಸಿ ಸೀತಮ್ಮ ಅವರ ಮನೆ ಬುಧವಾರ ರಾತ್ರಿಯ ಮಳೆಗೆ ಕುಸಿದಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment