ಲಿಂಗನಮಕ್ಕಿ ಜಲಾಶಯದ ಒಳ ಹರಿವು ಭಾರಿ ಇಳಿಕೆ, ಇವತ್ತು ಎಷ್ಟು ನೀರು ಡ್ಯಾಂಗೆ ಬರುತ್ತಿದೆ?

SHIVAMOGGA LIVE | 27 JULY 2023

SAGARA : ಮಲೆನಾಡು ಭಾಗದಲ್ಲಿ ಮಳೆ ತೀವ್ರತೆ ತುಸು ಕಡಿಮೆಯಾಗಿದೆ. ಹಾಗಾಗಿ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ (Linganamakki Dam) ಒಳ ಹರಿವು ಬಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಇದನ್ನೂ ಓದಿ – ಅಂಜನಾಪುರ ಜಲಾಶಯ ಭರ್ತಿ, ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಜು.27ರಂದು ಲಿಂಗನಮಕ್ಕಿ ಜಲಾಶಯಕ್ಕೆ 42,990 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ನೀರಿನ ಮಟ್ಟ 1784.40 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ 2.10 ಅಡಿ ಎಷ್ಟು ನೀರು ಏರಿಕೆಯಾಗಿದೆ. ಜು.26ರ ಬೆಳಗ್ಗೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು 68,645 ಕ್ಯೂಸೆಕ್‌ ಇತ್ತು. ಬುಧವಾರಕ್ಕೆ ಹೋಲಿಕೆ ಮಾಡಿದರೆ ಇವತ್ತು 25 ಸಾವಿರ ಕ್ಯೂಸೆಕ್‌ ಒಳ ಹರಿವು ಇಳಿಕೆಯಾಗಿದೆ.

PARISHRAMA NEET Academy

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment