ಲಿಂಗನಮಕ್ಕಿ ಜಲಾಶಯದ ಹೊರ ಹರಿವು ಇಳಿಕೆ, ಇವತ್ತು ಎಷ್ಟಿದೆ?

ಸಾಗರ: ಲಿಂಗನಮಕ್ಕಿ ಜಲಾಶಯದ (linganamakki dam) ರೇಡಿಯಲ್‌ ಗೇಟ್‌ ಮೂಲಕ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗಿದೆ. ಒಳ ಹರಿವು ಪ್ರಮಾಣ ಕಡಿಮೆಯಾದ್ದರಿಂದ ನೀರಿನ ಹೊರ ಹರಿವು ಕಡಿಮೆ ಮಾಡಲಾಗಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇವತ್ತು 29,784 ಕ್ಯೂಸೆಕ್‌ ಒಳ ಹರಿವು ಇದೆ. ಒಟ್ಟು ಹೊರ ಹರಿವು 17,150 ಕ್ಯೂಸೆಕ್‌ ಇದೆ. ಈ ಪೈಕಿ ರೇಡಿಯಲ್‌ ಗೇಟ್‌ ಮೂಲಕ 10,570 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

Linganamakki-dam-radial-gates-opened

ಪ್ರಸ್ತುತ ಜಲಾಶಯದ ನೀರಿನ ಮಟ್ಟ 1816.55 ಅಡಿ ಇದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.35 ಅಡಿಗೆ ಹೆಚ್ಚಳವಾಗಿದೆ. ನೀರಿನ ಮಟ್ಟ ಗರಿಷ್ಟ ಹಂತಕ್ಕೆ ತಲುಪಿದ್ದರಿಂದ ಮಂಗಳವಾರ ರೇಡಿಯಲ್‌ ಗೇಟ್‌ಗಳನ್ನು ಮೇಲೆತ್ತಿ 15 ಸಾವಿರ ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿತ್ತು.

ಇದನ್ನೂ ಓದಿ » ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

linganamakki dam outflow decreased

Linganamakki-dam-radial-gates-opened

Leave a Comment