ಸಾಗರ ನಗರಸಭೆಗೆ ಲೋಕಾಯುಕ್ತರು ದಿಢೀರ್‌ ಭೇಟಿ, ದಾಖಲೆಗಳ ಪರಿಶೀಲನೆ, ಕಾರಣವೇನು?

ಸಾಗರ: ಪಟ್ಟಣದ ಜಂಬಗಾರು ಬಡಾವಣೆಯ ಸರ್ವೇ ನಂ. 63ರ 4 ಎಕರೆ ಭೂಮಿ ಅಕ್ರಮವಾಗಿ ಖಾತೆಯಾಗಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ನಗರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ಈ ಅಕ್ರಮದ ಸಂಬಂಧ ಲೋಕಾಯುಕ್ತರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಅಗತ್ಯ ದಾಖಲೆ ಹಾಗೂ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನಗರಸಭೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಲಾಗಿದೆ.

Sagara-City-Muncipality-Nagarasabhe

ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್‌, ಇನ್‌ಸ್ಪೆಕ್ಟರ್ ರುದ್ರೇಶ್, ವೀರಬಸಪ್ಪ ಹಾಗೂ ಸಿಬ್ಬಂದಿ ಟೀಕಪ್ಪ, ಮಂಜುನಾಥ್, ಸುರೇಂದ್ರ, ಆದರ್ಶ್, ಚಂದ್ರಬಾಯಿ, ಅಂಜಲಿ, ಚೇತನ್ ಮತ್ತು ಆನಂದ್ ಇದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ