ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಸಂಸ್ಥೆಗೇ ₹3,00,000 ವಂಚಿಸಿದ ಕ್ವಾಲಿಟಿ ಮ್ಯಾನೇಜರ್‌, ಏನಿದು ಕೇಸ್‌?

ಸಾಗರ: ಗ್ರಾಹಕರು ಮರುಪಾವತಿ ಮಾಡಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ (Finance) ಸಂಸ್ಥೆಗೆ ಕಟ್ಟದೆ ವಂಚಿಸಿದ ಬ್ರಾಂಚ್‌ ಕ್ವಾಲಿಟಿ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಲೆಕ್ಕ ಪರಿಶೋಧನೆ ಮಾಡಿದಾಗ ಕ್ವಾಲಿಟಿ ಮ್ಯಾನೇಜರ್‌ ₹3.03 ಲಕ್ಷ ವಂಚಿಸಿರುವು ಬೆಳಕಿಗೆ ಬಂದಿದೆ.

ಫೈನಾನ್ಸ್‌ ಸಂಸ್ಥೆಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುತ್ತದೆ. ಅವರು ಸಾಲ ಮರುಪಾವತಿ ಮಾಡಿದ್ದನ್ನು ಕ್ವಾಲಿಟಿ ಮ್ಯಾನೇಜರ್‌ ಫೈನಾನ್ಸ್‌ ಸಂಸ್ಥೆಗೆ ಮರುಪಾವತಿಸಬೇಕು. 2024ರ ಡಿಸೆಂಬರ್‌ 10 ರಿಂದ 2025ರ ಮೇ 12ರವರೆಗೆ ₹3.03 ಲಕ್ಷವನ್ನು ಫೈನಾನ್ಸ್‌ ಸಂಸ್ಥೆಗೆ ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಲೆಕ್ಕ ಪರಿಶೋಧನೆ ವೇಳೆ ಈ ವಿಷಯ ಗೊತ್ತಾಗಿದೆ. ಹಣವ ಪಾವತಿಸುವಂತೆ ಸೂಚಿಸಿದರು ಕ್ವಾಲಿಟಿ ಮ್ಯಾನೇಜರ್‌ ಹಣ ಕಟ್ಟಿಲ್ಲ. ಈ ಹಿನ್ನೆಲೆ ಸಾಗರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » 15 ನಿಮಿಷದ ಬಳಿಕ ಗಾಂಧಿ ಪಾರ್ಕ್‌ ಗೇಟ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

JNNCE-Admission-Advt-scaled

Manager scams Finance institute

Sagara Police Station Building

Leave a Comment