ಸಾಗರ: ಮಿನಿ ಬಸ್‌ನ ಹಿಂಬದಿಯ ಬಾಗಿಲು ದಿಢೀರ್ ತೆರೆದುಕೊಂಡಿದ್ದು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ತಗುಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಸಾಗರ ನಗರದ ಎಸ್‌ಎನ್ ಸರ್ಕಲ್ ಬಳಿ ಘಟನೆ ನಡೆದಿದೆ. ತರೀಕೆರೆ ತಾಲ್ಲೂಕಿನ ಕಲ್ಲಾಟಿಪುರದ ಕೂಲಿ ಕಾರ್ಮಿಕ ಕೃಷ್ಣ (35) ಗಾಯಗೊಂಡಿದ್ದಾರೆ. ಕೃಷ್ಣ ಹಾಗೂ ಅವರ ಸಂಬಂಧಿ ದೇವರಾಜ ಅವರು ಸಿಗಂದೂರು ರಸ್ತೆಯಿಂದ ಬಿ.ಎಚ್. ರಸ್ತೆಗೆ ಬರಲು ಎಸ್‌ಎನ್ ಸರ್ಕಲ್ ಹತ್ತಿರ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಎದುರುಗಡೆಯಿಂದ ಬಂದ ಮಿನಿ ಬಸ್‌ನ ಹಿಂಬದಿಯ ಡೋರ್ ಲಾಕ್ ಮಾಡಿರಲಿಲ್ಲ. ಬಸ್ಸಿನ ಡೋರ್ ಹಠಾತ್ ತೆರೆದುಕೊಂಡು ದಾರಿಯಲ್ಲಿ ಹೋಗುತ್ತಿದ್ದ ಕೃಷ್ಣ ಅವರಿಗೆ ತಗುಲಿದ್ದು, ಅವರ ಎಡ ಭುಜ, ಮೂಗು, ಬಲಗೈಗೆ ಪೆಟ್ಟುಬಿದ್ದಿದೆ. ಕೂಡಲೆ ಕೃಷ್ಣ ಅವರನ್ನು ಸಾಗರದ ಸರ್ಕಾರಿ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.