SAGARA | ‘ಸಾಗರದಲ್ಲಿ ಸಂಶೋಧನಾ ಕೇಂದ್ರ ಸೂಕ್ತ, ಜಾತ್ರೆ ಬಳಿಕ ಸೊರಬ ರಸ್ತೆ ಅಗಲೀಕರಣ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA | 08 ಡಿಸೆಂಬರ್ 2019

ಮಂಗನ ಕಾಯಿಲೆ ಸಂಶೋಧನೆಗೆ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಸಂಶೋಧನ ಕೇಂದ್ರವನ್ನು ಸಾಗರದಲ್ಲೇ ಸ್ಥಾಪಿಸುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಸಾಗರ ಶಾಸಕ ಹಾಲಪ್ಪ ಅವರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಾಗರ ತಾಲೂಕಿನಲ್ಲಿ ಕೆಎಫ್’ಡಿಯಿಂದ ಜನರು ತತ್ತರಿಸಿದ್ದಾರೆ. ಹಾಗಾಗಿ ಇಲ್ಲಿಯೇ ಸಂಶೋಧನ ಕೇಂದ್ರ ತೆರೆಯುವುದು ಸೂಕ್ತ ಎಂದರು.

ಜಾತ್ರೆ ಬಳಿಕ ರಸ್ತೆ ಅಗಲೀಕರಣ

ಸೊರಬ ರಸ್ತೆ ಅಗಲೀಕರಣ ಕುರಿತು ಮಾತನಾಡಿದ ಸಚಿವ ಈಶ್ವರಪ್ಪ, ಶಾಸಕರು ಸ್ಥಳಕ್ಕೆ ಕರೆದೊಯ್ದು ರಸ್ತೆ ತೋರಿಸಿದ್ದಾರೆ. ಬಜೆಟ್’ನಲ್ಲಿ ಹಣ ಮೀಸಲಿಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಜಾತ್ರೆಯ ಬಳಿಕ ಅಗಲೀಕರಣ ಕುರಿತು ಗಮನಹರಿಸಲಾಗುತ್ತದೆ ಎಂದರು.

ಶಾಸಕ ಹೆಚ್.ಹಾಲಪ್ಪ, ಟಿ.ಡಿ.ಮೇಘರಾಜ್, ಪ್ರಸನ್ನ ಕೆರೆಕೈ, ಲೋಕನಾಥ ಬಿಳಿಸಿರಿ, ಗಣೇಶ್ ಪ್ರಸಾದ್, ಮಹೇಶ್, ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

District Incharge Minister K S Eshwarappa Visits Sagara and held meeting in MLA’s Office. He said the KFD Lab to be established in Sagara.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment