ಮುಪ್ಪಾನೆ ಲಾಂಚ್ ಸೇವೆ ತಾತ್ಕಾಲಿಕ ಸ್ಥಗಿತ, ಏನೆಲ್ಲ ಸಮಸ್ಯೆ ಆಗುತ್ತಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SAGARA | 11 ಜೂನ್ 2022

ಶರಾವತಿ ಹಿನ್ನೀರಿನ ಮಟ್ಟ ಕುಸಿದ ಹಿನ್ನೆಲೆ ಮುಪ್ಪಾನೆ (MUPPANE) ಮಾರ್ಗದ ಲಾಂಚ್ (LAUNCH) ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

Shimoga Nanjappa Hospital

ಮುಪ್ಪಾನೆ ಮಾರ್ಗದಲ್ಲಿ ಸಣ್ಣ ಲಾಂಚ್ ಇದೆ. ಕರೂರು ಹೋಬಳಿಯ ಹಲವು ಗ್ರಾಮಗಳಿಗೆ ಈ ಲಾಂಚ್ ಸಂಪರ್ಕ ಸೇತುವೆಯಾಗಿತ್ತು. ಈಗ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಹೋಬಳಿಯ ಹಲವು ಗ್ರಾಮಗಳ ಜನರಿಗೆ ಸಂಕಷ್ಟ ತಂದೊಡ್ಡಿದೆ.

35 ಕಿ.ಮೀ ಬದಲು 72 ಕಿ.ಮೀ

ಕರೂರು ಹೋಬಳಿಯ ಒಳಗಿನ ಅನೇಕ ಗ್ರಾಮಗಳಿಗೆ ಮುಪ್ಪಾನೆ ಲಾಂಚ್ ಸಂಪರ್ಕ ಒದಗಿಸುತ್ತಿತ್ತು. 2017ರಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಈ ಮಾರ್ಗಕ್ಕೆ ಆದ್ಯತೆ ನೀಡಿ, ಜನ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಮುಪ್ಪಾನೆ ಲಾಂಚ್ ಇಲ್ಲದೆ ಹೋದರೆ ಈ ಭಾಗದ ಗ್ರಾಮಸ್ಥರು ಹೋಬಳಿ ಕೇಂದ್ರ ತಲುಪಲು 72 ಕಿ.ಮೀ ಸಂಚರಿಸಬೇಕಾಗುತ್ತದೆ. ಲಾಂಚ್ ಮೂಲಕ ಶರಾವತಿ ನದಿ ದಾಟಿದರೆ ಕೇವಲ 35 ಕಿ.ಮೀ ಮೂಲಕ ತಲುಪಬಹುದಾಗಿದೆ.

ಪೊಲೀಸರು, ಪ್ರವಾಸಿಗರಿಗೂ ಅನುಕೂಲ

ತುರ್ತು ಸಂದರ್ಭದಲ್ಲಿ ಪೊಲೀಸರು, ವಿದ್ಯುತ್ ಇಲಾಖೆ ಸಿಬ್ಬಂದಿ ಕರೂರು ಹೋಬಳಿಯ ಗ್ರಾಮಗಳಿಗೆ ತಲುಪಲು ಲಾಂಚ್ ಬಳಕೆ ಮಾಡಿಕೊಳ್ಳುತ್ತಿದ್ದರು. ಶಿರಸಿ, ಸಿದ್ಧಾಪುರ ಮಾರ್ಗದಲ್ಲಿ ಓಡಾಡುವವರಿಗೂ ಲಾಂಚ್ ಅನುಕೂಲವಾಗಿತ್ತು. ಸಿಗಂದೂರು ಪ್ರವಾಸಿಗರು ಕೂಡ ಈ ಮಾರ್ಗದಲ್ಲಿ ಓಡಾಡುತ್ತಿದ್ದರು.

ಮುಪ್ಪಾನೆ ಲಾಂಚ್ ಸ್ಥಗಿತಗೊಂಡಿರುವುದರಿಂದ ಜನರು ಸುತ್ತಿಬಳಸಿ ಓಡಾಡುವಂತಾಗಿದೆ. ಮಳೆ ಹೆಚ್ಚಳವಾಗಿ ಹಿನ್ನೀರಿನ ಮಟ್ಟ ಏರಿಕೆಯಾದರೆ ಲಾಂಚ್ ಸೇವೆ ಪುನಾರಂಭವಾಗಲಿದೆ.

ಇದನ್ನೂ ಓದಿ – ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ನಡುರಸ್ತೆಯಲ್ಲೇ ಧಗಧಗ ಸುಟ್ಟು ಕರಕಲು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment