SHIVAMOGGA LIVE | 27 MAY 2023
TUMARI : ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಮುಪ್ಪಾನೆ ಲಾಂಚ್ (Muppane Launch) ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ. ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶುಕ್ರವಾರ ಆಗಿದ್ದೇನು?
ಶರಾವತಿ ಹಿನ್ನೀರು ಭಾಗದ ಹಲ್ಕೆ – ಮುಪ್ಪಾನೆ ಲಾಂಚ್ (Muppane Launch) ಸಂಚರಿಸುತ್ತದೆ. ಶುಕ್ರವಾರ ಲಾಂಚ್ಗೆ ಮರದ ದಿಮ್ಮಿಗಳು, ಮರಳಿನ ದಿಬ್ಬ ತಗುಲಿದೆ. ನೀರಿನ ಮಟ್ಟ ಕುಸತದಿಂದಾಗಿ ಈ ರೀತಿಯಾಗಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಈವರೆಗಿನ ವಾಡಿಕೆ ಮಳೆಯಾಗಿಲ್ಲ. ಮುಂಗಾರು ಬಿರುಸಾದರೆ ನೀರಿನ ಮಟ್ಟ ಹೆಚ್ಚಳವಾಗಲಿದೆ. ಆಗ ಲಾಂಚ್ ಪುನಾರಂಭ ಮಾಡಬಹುದು.
![]() |
ಇದನ್ನೂ ಓದಿ – ಸಚಿವ ಸಂಪುಟದಲ್ಲಿ ಶಿವಮೊಗ್ಗಕ್ಕೆ ಸಿಕ್ತು ಪ್ರಾತಿನಿಧ್ಯ, ಮಧು ಬಂಗಾರಪ್ಪಗೆ ಯಾವ ಖಾತೆ ಸಿಗಲಿದೆ?
ಪ್ರಯಾಣಿಕರ ಸುರಕ್ಷತೆಗಾಗಿ ಸೇವೆ ಸ್ಥಗಿತ
ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಮರದ ದಿಮ್ಮಿಗಳು, ಮರಳಿನ ದಿಬ್ಬಗಳು ಲಾಂಚ್ ಕೆಳ ಭಾಗಕ್ಕೆ ತಗುಲಲಿವೆ. ಇದರಿಂದ ಲಾಂಚ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಲಿದೆ. ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಕರೂರು ಹೋಬಳಿಯಿಂದ ಕಾರ್ಗಲ್, ಜೋಗಕ್ಕೆ ಸಮೀಪದ ದಾರಿ ಇದಾಗಿದೆ. ಲಾಂಚ್ ಸೇವೆ ಕುರಿತು ಅರಿವಿರುವ ಪ್ರವಾಸಿಗರು ಇದೆ ಮಾರ್ಗವಾಗಿ ಕಾರ್ಗಲ್, ಜೋಗಕ್ಕೆ ತಲುಪುತ್ತಾರೆ. ತುರ್ತು ಸಂದರ್ಭದಲ್ಲಿಯು ಈ ಲಾಂಚ್ ಸ್ಥಳೀಯರಿಗೆ ಅನುಕೂಲವಾಗಿತ್ತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200