ಶಿವಮೊಗ್ಗ ಲೈವ್.ಕಾಂ | SAGARA NEWS | 25 ಜೂನ್ 2020
ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದ ನಾಟಿ ವೈದ್ಯ ನಾರಾಯಣಮೂರ್ತಿ ನಿಧನರಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾರಾಯಣಮೂರ್ತಿ (81), ಅವರು ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಕ್ಯಾನ್ಸರ್ ಮತ್ತು ಇತರೆ ಕಾಯಿಲೆಗಳಿಗೆ ಇವರು ನಾಟಿ ಔಷಧಿ ಕೊಡುತ್ತಿದ್ದರು. ಹಾಗಾಗಿ ಭಾರತ ಸೇರಿದಂತೆ ವಿವಿಧೆಡೆಯಿಂದ ಹಲವರು ಔಷಧಿಗಾಗಿ ಸಾಗರ ತಾಲೂಕು ಆನಂದಪುರದ ನರಸೀಪುರಕ್ಕೆ ಬರುತ್ತಿದ್ದರು.
ಲಾಕ್ ಡೌನ್ ಬೆನ್ನಿಗೆ ಔಷಧಿ ಬಂದ್
ಔಷಧಿಗಾಗಿ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದಿಂದ ಜನರು ಬರುತ್ತಿದ್ದರು. ಬೆಳಗ್ಗೆ ಔಷಧಿ ಕೊಡಲು ಆರಂಭವಾದರೆ, ನಡು ರಾತ್ರಿಯೇ ಜನರು ಬಂದು ಕ್ಯೂ ನಿಲ್ಲುತ್ತಿದ್ದರು. ಇತ್ತೀಚೆಗೆ ಕರೋನ ಲಾಕ್ ಡೌನ್ ಹಿನ್ನೆಲೆ ಔಷಧಿ ಕೊಡುವುದು ನಿಂತು ಹೋಗಿತ್ತು.
ಮಿನಿಸ್ಟರ್ಗಳಿಂದಲೇ ಬರುತ್ತಿತ್ತು ಮನವಿ..!
ನಾರಾಯಣಮೂರ್ತಿ ಅವರಿಂದ ಔಷಧ ಬೇಕು ಎಂದು ಮಿನಿಸ್ಟರ್ಗಳೇ ಬೇಡಿಕೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಲಾಕ್ ಡೌನ್ ಅವಧಿಯಲ್ಲಿ ರಾಜ್ಯವೊಂದರ ಸಚಿವರೊಬ್ಬರು ಔಷಧಿ ಬೇಕು ಎಂದು ಮನವಿ ಸಲ್ಲಿಸಿದ್ದರು. ಅವರಿಗೆ ಔಷಧಿ ಪೂರೈಸಲಾಗಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಇತ್ತೀಚೆಗೆ ಸ್ಮರಿಸಿಕೊಂಡಿದ್ದರು.
ಔಷಧಿ ಪೂರೈಕೆ ಆರಂಭಿಸೋಣ
ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿದಂತೆ ಹಲವರು ಇತ್ತೀಚೆಗಷ್ಟೇ ನಾಟಿ ವೈದ್ಯ ನಾರಾಯಣಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದರು. ಔಷಧಿ ಕೊಡುವುದನ್ನು ಆರಂಭಿಸಿ ಎಂದು ಮನವಿ ಮಾಡಿದ್ದರು. ಊರಿಗೆ ಮೂಲಸೌಕರ್ಯ ಒದಗಿಸಲು ವ್ಯವಸ್ಥೆ ಮಾಡುವುದಾಗಿ ಶಾಸಕ ಹರತಾಳು ಹಾಲಪ್ಪ ಅವರು ತಿಳಿಸಿದ್ದರು.
ರಾತ್ರಿ ಹೃದಯಾಘಾತ
ನಾಟಿ ವೈದ್ಯ ನಾರಾಯಣ ಮೂರ್ತಿ ಅವರಿಗೆ ರಾತ್ರಿ ಹೃದಯಾಘಾತ ಸಂಭವಿಸಿದೆ. ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ, ಪುತ್ರ, ನಾಲ್ವರು ಪುತ್ರಿಯರನ್ನು ಇದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]