ಸಾಗರದಿಂದ ಮಂಗಳೂರಿಗೆ ಹೊಸ ರಾಜಹಂಸ ಬಸ್‌, ಟೈಮಿಂಗ್‌ ಏನು?

SHIVAMOGGA LIVE NEWS, 5 DECEMBER 2024

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಸಾಗರ : ಸಾಗರದಿಂದ ಮಂಗಳೂರಿಗೆ ನೂತನವಾಗಿ ಆರಂಭಗೊಂಡಿರುವ ಕೆಎಸ್ಆರ್‌ಟಿಸಿ ರಾಜಹಂಸ ಬಸ್ (Rajahamsa Bus) ಸಂಚಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು.

ಬಸ್ಸಿನ ಟೈಮಿಂಗ್‌ ಏನು?

ನೂತನ ರಾಜಹಂಸ ಬಸ್‌ ಸಾಗರದಿಂದ ರಾತ್ರಿ 10.10ಕ್ಕೆ ಹೊರಡಲಿದೆ. ಬೆಳಗಿನ ಜಾವ 4ಕ್ಕೆ ಮಂಗಳೂರು, 4.45ಕ್ಕೆ ಯನಪೋಯ ಆಸ್ಪತ್ರೆ ತಲುಪುತ್ತದೆ. ಮಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಡುವ ಬಸ್ ಬೆಳಗಿನ ಜಾವ 4.30ಕ್ಕೆ ಸಾಗರ ತಲುಪುತ್ತದೆ.

Nanjappa Hospital Advertisement

Sagara-Mangalore-Rajahamsa-bus-launch-Beluru-Gopalakrishna

ಎಂಎಲ್‌ಎ ಹೇಳಿದ್ದೇನು?

ಇದೇ ವೇಳೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವ ರೋಗಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ಅನ್ನು ಈಗಾಗಲೇ ಕಲ್ಪಿಸಲಾಗಿದೆ. ಈ ಭಾಗದಿಂದ ಮಂಗಳೂರಿನ ವೆನ್ ಲಾಕ್, ಎನಪೋಯಾ ಆಸ್ಪತ್ರೆಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ತೆರಳುವುದರಿಂದ ಅವರ ಬೇಡಿಕೆಯಂತೆ ನೂತನ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.

ಶಕ್ತಿ ಯೋಜನೆ ಜಾರಿಗೆ ಬರುವ ಮೊದಲು ಸರ್ಕಾರಿ ಬಸ್‌ಗಳಲ್ಲಿದ್ದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಈಗ ಸಾಕಷ್ಟು ಹೆಚ್ಚಳವಾಗಿದೆ. ಪ್ರಯಾಣಿಕರು ವಿರಳವಾಗಿರುತ್ತಿದ್ದ ಕೆಲವು ಮಾರ್ಗಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ಸಾರಿಗೆ ಸಂಸ್ಥೆಗೆ ಲಾಭ ತರಲು ಕಾರಣವಾಗಿದೆ.

– ಬೇಳೂರು ಗೋಪಾಲಕೃಷ್ಣ, ಶಾಸಕ

Sagara-Mangalore-Rajahamsa-bus-launch-Beluru-Gopalakrishna

RED-LINE-

ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ರವಿ ಲಿಂಗನಮಕ್ಕಿ, ಪ್ರಮುಖರಾದ ಐ.ಎನ್.ಸುರೇಶ್ ಬಾಬು, ಕಲಸೆ ಚಂದ್ರಪ್ಪ, ಚೇತನ್ ರಾಜ್ ಕಣ್ಣೂರು ಸೇರಿದಂತೆ ಹಲವರು ಇದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment