ಕಾರ್ಗಲ್‌ನಲ್ಲಿ ಧಗಧಗ ಹೊತ್ತಿ ಉರಿದ ಬಣ್ಣದ ಅಂಗಡಿ, ಲಕ್ಷ ಲಕ್ಷ ನಷ್ಟ, ಹೇಗಾಯ್ತು ಘಟನೆ?

ಕಾರ್ಗಲ್: ಇಲ್ಲಿನ ಕಿಸಾನ್ ಟ್ರೇಡರ್ಸ್ ಬಣ್ಣದ ಅಂಗಡಿಗೆ (Paint shop) ಶಾರ್ಟ್‌ ಸರ್ಕೀಟ್‌ನಿಂದ (Short circuit) ಬೆಂಕಿ ಹೊತ್ತಿಕೊಂಡಿತ್ತು (Caught fire). ಇದರಿಂದ ದೊಡ್ಡ ಮೊತ್ತದ ನಷ್ಟವಾಗಿದೆ (Huge loss). (ಈ ಸುದ್ದಿಯನ್ನು ಇನ್ನು 27 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಬೆಂಕಿ ಅವಘಡದಿಂದ (Fire accident) ಕಂಪ್ಯೂಟರ್ (Computer), ಬಣ್ಣಗಳ ಮಿಶ್ರಣ ಯಂತ್ರ (Paint mixing machine), ಲೆಕ್ಕ ಪತ್ರಗಳು (Account documents), ಬಣ್ಣದ ಡಬ್ಬಿಗಳು ಸೇರಿ ಅಂದಾಜು ₹25 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು (MESCOM officials), ಅಗ್ನಿಶಾಮಕ ದಳದವರು (Fire brigade) ಭೇಟಿ ನೀಡಿ ಪರಿಶೀಲಿಸಿದರು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

ARGAL-NEWS-GRAPHICS-BY-SHIVAMOGGA-LIVE