ಆನಂದಪುರ ಠಾಣೆಯಲ್ಲಿ ಶಿವಮೊಗ್ಗದ ಟಿಪ್ಪು ನಗರದ ಸೋನು ಅರೆಸ್ಟ್‌, ಏನಿದು ಕೇಸ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಸಾಗರ: ತಾಲೂಕಿನ ಆಚಾಪುರ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಟೈರ್ ಮತ್ತು ರಿಮ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ₹45,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಟಿಪ್ಪು ನಗರ ಶಿವಮೊಗ್ಗ ನಿವಾಸಿ ಸೋನು ಬಂಧಿತ ಆರೋಪಿ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಈತ ಫೆಬ್ರವರಿ 6ರಂದು ರಾತ್ರಿ ಆಚಾಪುರ ಗ್ರಾಮದಲ್ಲಿ 3 ಟೈರ್ ಹಾಗೂ ರಿಮ್‌ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 3ರಂದು ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹45,000 ಮೌಲ್ಯದ 3 ಟೈರ್ ಮತ್ತು ರಿಮ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Anandapura-Police-Arrest-tippunagara-Sonu