ಸಾಗರ: ತಾಲೂಕಿನ ಕೆಳದಿ ರಸ್ತೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ಹೋರಿ ಕರುಗಳನ್ನು ರಕ್ಷಿಸಿದ್ದಾರೆ.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಡ್ರೈವರ್ ಸೇರಿ ಇಬ್ಬರು ಎಸ್ಕೇಪ್
ಕೆಳದಿ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದರು. ವಾಹನವೊಂದರ ಮೇಲೆ ಸಂಶಯಗೊಂಡು ನಿಲ್ಲಿಸಲು ಸೂಚಿಸಿದರು. ಪೊಲೀಸರನ್ನು ಕಂಡೊಡನೆ ವಾಹನವನ್ನು ಅರ್ಧದಲ್ಲೇ ನಿಲ್ಲಿಸಿದ ಚಾಲಕ ಮತ್ತು ಪಕ್ಕದಲ್ಲಿದ್ದ ವ್ಯಕ್ತಿ ಸಮೀಪದ ನೀಲಗಿರಿ ತೋಪಿನೊಳಗೆ ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ವಾಹನವನ್ನು ಪರಿಶೀಲಿಸಿದಾಗ, ಮಲೆನಾಡು ಗಿಡ್ಡ ತಳಿಯ ಸುಮಾರು ₹25,000 ಮೌಲ್ಯದ ನಾಲ್ಕು ಹೋರಿ ಕರುಗಳು ಪತ್ತೆಯಾಗಿವೆ. ಕೂಡಲೆ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
