ಸಾಗರ: ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾರಾಯಣಗುರು ಮಹಾ ಒಕ್ಕೂಟದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಈಡಿಗರ ಸಭಾ ಭವನದಲ್ಲಿ ನಾರಾಯಣಗುರು ಮಹಾ ಒಕ್ಕೂಟ, ಜಿಲ್ಲಾ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಒಕ್ಕೂಟದ ಉದ್ಘಾಟನಾ ಸಮಾರಂಭ ಈಡಿಗರ ವಿವಿಧ ಸಮುದಾಯಗಳ ಒಗ್ಗೂಡುವಿಕೆಗೆ ವೇದಿಕೆ ಆಗಲಿದೆ’ ಎಂದು ಹೇಳಿದರು.

ಒಕ್ಕೂಟವು ಯಾವುದೇ ವ್ಯಕ್ತಿಯನ್ನು ವೈಭವೀಕರಿಸಲು ಅಥವಾ ಇನ್ನೊಂದು ಸಂಘಟನೆಗೆ ಪರ್ಯಾಯವಾಗಿ ಹುಟ್ಟಿಲ್ಲ. ಈಡಿಗ ಸಮಾಜದ 26 ಪಂಗಡಗಳು ಚದುರಿ ಹೋಗದಂತೆ ಸಮುದಾಯದ ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶ ಹೊಂದಿದೆ.
– ಜೆ.ಪಿ. ಸುಧಾಕರ, ಒಕ್ಕೂಟದ ಅಧ್ಯಕ್ಷ
ಸಭೆಯಲ್ಲಿ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಪ್ರಮುಖರಾದ ಶ್ರೀಧರ ಹುಲ್ತಿಕೊಪ್ಪ, ಸಾವಿತ್ರಮ್ಮ, ಭುಜಂಗಯ್ಯ, ಶೇಖರಪ್ಪ, ರಾಮಚಂದ್ರಪ್ಪ, ಸತೀಶ್, ಪ್ರಭಾವತಿ, ಪುಷ್ಪಕಲಾ, ಗಿರೀಶ್ ಇದ್ದರು.