ಸಾಗರದಲ್ಲಿ ಬಸ್‌ ಹತ್ತಿದ ದಾವಣಗೆರೆ ಮಹಿಳೆ, ಐಬಿ ಸರ್ಕಲ್‌ ಬಳಿ ಕಾದಿತ್ತು ಆಘಾತ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಸಾಗರ: KSRTC ಬಸ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣವಿದ್ದ ಪರ್ಸ್‌ ಕಳ್ಳತನ ಮಾಡಲಾಗಿದೆ. ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ ನಡೆದಿರುವ ಕುರಿತು ಶಂಕೆ ಇದೆ.

ನಯನಾ ಎಂಬುವವರು ಸಾಗರ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ದಾವಣಗೆರೆಗೆ ಬಸ್‌ ಹತ್ತಿದ್ದರು. ಐಬಿ ಸರ್ಕಲ್‌ ಬಳಿ ಬಸ್‌ ತೆರಳುತ್ತಿರುವಾಗ ಟಿಕೆಟ್‌ ಮಾಡಿಸಲು ಬ್ಯಾಗ್‌ನಲ್ಲಿದ್ದ ಪರ್ಸ್‌ ತೆಗೆಯಲು ಮುಂದಾದರು. ಆಗ ಪರ್ಸ್‌ ಇಲ್ಲದಿರುವುದು ಗೊತ್ತಾಗಿದೆ. ಪರ್ಸ್‌ನಲ್ಲಿ ₹1.73 ಲಕ್ಷದ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಸ್‌ ಹತ್ತುವುದಕ್ಕು ಮುನ್ನ ನಯನಾ ಅವರಿಗೆ ಕರೆ ಬಂದಿತ್ತು. ಮಾತು ಮುಗಿಸಿದ ನಂತರ ಮೊಬೈಲ್‌ ಫೋನ್‌ ಅನ್ನು ಬ್ಯಾಗಿನಲ್ಲಿ ಇರಿಸಿದ್ದರು. ಆಗ ಪರ್ಸ್‌ ಬ್ಯಾಗಿನಲ್ಲೇ ಇತ್ತು. ಟಿಕೆಟ್‌ ಮಾಡಿಸಲು ಮುಂದಾದಾಗ ಪರ್ಸ್‌ ಕಳ್ಳತನ ಆಗಿರುವುದು ಗೊತ್ತಾಗಿದೆ. ಪರ್ಸ್‌ನಲ್ಲಿ ನೆಕ್ಲೇಸ್‌, ಕಿವಿಯೋಲೆ, ಎರಡು ಉಂಗುರಗಳು ಇದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಆಫೀಸಿನಲ್ಲಿ ಕೆಲಸ ಮುಗಿಸಿ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ, ಆಗಿದ್ದೇನು?

Leave a Comment