ಆನಂದಪುರ ಸುತ್ತಮುತ್ತ ಗ್ರಾಮಗಳಲ್ಲಿ ಭಾರಿ ಗಾಳಿ, ಮಳೆ, ಮನೆಗಳ ಮೇಲೆ ಬಿದ್ದ ಮರ, ಯುವತಿಗೆ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA | 5 ಏಪ್ರಿಲ್ 2020

ಆನಂದಪುರ ಸುತ್ತಮುತ್ತ ಶನಿವಾರ ಭಾರಿ ಗಾಳಿ, ಮಳೆಯಾಗಿದೆ. ಗಾಳಿಯ ರಭಸಕ್ಕೆ ಮರಗಳು ಬುಡಮೇಲಾಗಿದ್ದು, ಮನೆಗಳ ಮೇಲೆ ಉರುಳಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.

ಚನ್ನಶೆಟ್ಟಿಕೊಪ್ಪ ಗ್ರಾಮದ ಮೋಹನ್ ವಜ್ರಪ್ಪ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದು ಮೇಲ್ಛಾವಣಿ ಜಖಂ ಆಗಿದೆ. ಮನೆಯೊಳಗಿದ್ದ ಮೇಘಾ (20) ಎಂಬ ಯುವತಿ ತಲೆ ಮೇಲೆ ಹೆಂಚು ಮತ್ತು ರೀಪು ಬಿದ್ದು ಪೆಟ್ಟಾಗಿದೆ. ಗಾಯಾಳುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

https://www.facebook.com/liveshivamogga/videos/2719023748195030/?t=3

ಇದೇ ಗ್ರಾಮದ ಚೌಡಪ್ಪ ಎಂಬುವವರ ಮನೆ ಮೇಲೂ ಮರ ಬಿದ್ದಿದೆ. ಮನೆ ಭಾಗಶಃ ಜಖಂಗೊಂಡಿದೆ. ಎಂಟಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ, ಕಡಿ ಮಾಡಿಗೆ ಬಳಸಿದ ತಗಡು ಹಾರಿ ಹೋಗಿದೆ. ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಾಪುರ ಗ್ರಾಮದಲ್ಲೂ ಮಳೆಯಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment