SHIMOGA REPORT, 30 OCTOBER 2024 : ಹಸೆ ಚಿತ್ತಾರ ಕಲಾವಿದ ಸಾಗರ ತಾಲೂಕಿನ ಸಿರಿವಂತೆಯ ಚಂದ್ರಶೇಖರ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ (Award) ಲಭಿಸಿದೆ.
69 ಪ್ರಶಸ್ತಿ ಪ್ರಕಟ
2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಸಂಘ – ಸಂಸ್ಥೆಗಳು ಮತ್ತು ವೈಯಕ್ತಿಕ ವಿಭಾಗದಲ್ಲಿ ಒಟ್ಟು 69 ಪ್ರಶಸ್ತಿಗಳನ್ನು ಈ ಬಾರಿ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಒಬ್ಬರಿಗೆ ಮಾತ್ರ ಪ್ರಶಸ್ತಿ ದೊರೆತಿದೆ.
ಎರಡೂವರೆ ದಶಕದ ತಪಸ್ಸು
ಸಿರಿವಂತೆ ಚಂದ್ರಶೇಖರ್ ಅವರು ಕಳೆದ ಎರಡೂವರೆ ದಶಕದಿಂದ ಹಸೆ ಚಿತ್ತಾರಗಳನ್ನು ರಚಿಸಿ ರಾಜ್ಯಾದ್ಯಂತ ಜನಪ್ರಿಯಗೊಳಿಸಿದ್ದಾರೆ. ವಿದ್ಯಾರ್ಥಿಗಳು, ಕಲೆಯ ಆಸಕ್ತರು ಇವರಿಂದ ಹಸೆ ಚಿತ್ತಾರ ಕಲಿತು ಮತ್ತಷ್ಟು ಕಡೆ ಪ್ರಚುರಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಿರಿವಂತೆ ಚಂದ್ರಶೇಖರ್ ಅವರ ಮನೆಯನ್ನು ಹಸೆ ಚಿತ್ತಾರದ ವಿಶ್ವವಿದ್ಯಾಲಯ ಎಂದೂ ಬಣ್ಣಿಸಲಾಗುತ್ತದೆ. ರಾಜ್ಯ ಸರ್ಕಾರ ಈ ಬಾರಿಯ ಕರಕುಶಲ ವಿಭಾಗದಲ್ಲಿ ಸಿರಿವಂತೆ ಚಂದ್ರಶೇಖರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಖುಷಿಯಾಗುತ್ತಿದೆ. ಕಳೆದ 25 ವರ್ಷದಿಂದ ತಪಸ್ಸಿನಂತೆ ಹಸೆ ಚಿತ್ತಾರ ಬಿಡಿಸಿದ್ದೇನೆ. ಪ್ರಶಸ್ತಿಗಾಗಿ ಯಾರ ಬೆನ್ನು ಹತ್ತದೆ, ಯಾವುದೆ ಇನ್ಫ್ಲೂಯನ್ಸ್ ಮಾಡಿಸಿರಲಿಲ್ಲ. ಅರ್ಹತೆ ಗುರುತಿಸಿ ಸರ್ಕಾರ ಪ್ರಶಸ್ತಿ ಘೋಷಿಸಿರುವುದು ಖುಷಿ ತಂದಿದೆ.
ಸಿರಿವಂತೆ ಚಂದ್ರಶೇಖರ್, ಹಸೆ ಚಿತ್ತಾರ ಕಲಾವಿದ
ಚಂದ್ರಶೇಖರ್ ಅವರು ಗಾಜು, ಗೋಡೆ, ಹ್ಯಾಂಡ್ ಮೇಡ್ ಪೇಪರ್ ಮೇಲೆ ಹಸೆ ಚಿತ್ತಾರ ರೂಪಿಸಿದ್ದಾರೆ. ಭೂಮಿ ಹುಣ್ಣಿಮೆಗೆ ಬೂಮಣ್ಣಿ ಬುಟ್ಟಿಗಳನ್ನು ಕೂಡ ತಯಾರಿಸುತ್ತಾರೆ. ಸಿರಿವಂತೆ ಚಂದ್ರಶೇಖರ್ ಅವರ ರಚನೆಯ ಕಲಾಕೃತಿಗಳಿಗೆ ರೈತಾಪಿ ವರ್ಗದಲ್ಲಿ ಬಹಳ ಬೇಡಿಕೆಯು ಇದೆ.
ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ 8 ವರ್ಷದ ಬಳಿಕ ಆಭರಣ ಎಣಿಕೆ, ಕೆ.ಜಿಗಟ್ಟಲೆ ಚಿನ್ನ, ಬೆಳ್ಳಿ ಸಂಗ್ರಹ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200