ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 28 MARCH 2024
BYKODU : ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆಗೆ ರೋಪ್ ವೇ ಅಳವಡಿಕೆ ಕಾರ್ಯ ಆರಂಭವಾಗಿದೆ. ಬುಧವಾರ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಏನಿದು ರೋಪ್ ವೇ?
ಸಿಗಂದೂರು ಸೇತುವೆ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಸೆಗ್ಮೆಂಟ್ ಜೋಡಣೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರೋಪ್ ವೇ ಸೇತುವೆಯ ಪ್ರಮುಖ ಕಾರ್ಯ. ಇದರ ಆಧಾರದಲ್ಲಿಯೇ ಸೇತುವೆ ಸಮತೋಲನ ಕಾಯ್ದುಕೊಳ್ಳಲಿದೆ.
ಪೂಜೆ ಬಳಿಕ ಕಾರ್ಯಾರಂಭ
ರೋಪ್ ವೇ ಅಳವಡಿಕೆ ಕಾರ್ಯದ ಹಿನ್ನೆಲೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೂಜೆ ಸಲ್ಲಿ ಕಾರ್ಯಾರಂಭ ಮಾಡಿದರು. ಶಿವಮೊಗ್ಗದ ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಿಂಗಪ್ಪ, ಉಸ್ತುವಾರಿ ಎಂಜಿನಿಯರ್ ಪೀರ್ ಪಾಷ, ಸುನೀಲ್, ದಿಲೀಪ್ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಪೂರ್ಣಚಂದ್ರ ಸತ್ಯನಾರಾಯಣ, ಸಿಗಂದೂರು ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್ ಹಾಗೂ ಕಾರ್ಮಿಕರು ಇದ್ದರು.

ಇದನ್ನೂ ಓದಿ – ಜ್ಯೋತಿಷ್ಯ ಕೇಳಲು ಕರೆ ಮಾಡಿದ ಶಿವಮೊಗ್ಗದ ಮಹಿಳೆಗೆ ಎದುರಾಯ್ತು ದೊಡ್ಡ ಸಂಕಷ್ಟ, ಆಗಿದ್ದೇನು?
LATEST NEWS
- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 9 ಮಾರ್ಚ್ 2026

- ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನೀಡಿದ ಭದ್ರಾವತಿ ರಾಜು, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





