ಶಿವಮೊಗ್ಗ LIVE
ಸಾಗರ: ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಡಿಸೆಂಬರ್ 17ರಂದು ಸಾಗರ ಬಂದ್ (Sagara Bandh) ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟೆನೆಗಳು ಬೆಂಬಲ ನೀಡಿವೆ ಎಂದು ಸಾಗರ ಜಿಲ್ಲೆ ಹೋರಾಟ ಸಮಿತಿಯ ತೀ.ನಾ.ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್, ಸಾಗರವನ್ನು ಜಿಲ್ಲೆ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಬಂದ್ ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.

ತೀರ್ಥಹಳ್ಳಿ, ಶಿಕಾರಿಪುರಕ್ಕೆ ಹೋಲಿಕೆ ಮಾಡಿದರೆ ಸಾಗರದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ಜಿಲ್ಲೆ ಮಾಡಿದರೆ ಅಭಿವೃದ್ಧಿ ಆಗಲಿದೆ. ತಮ್ಮ ಮನವಿಗೆ ಸ್ಪಂದಿಸಿದ ಶಾಸಕರು ಜಿಲ್ಲೆ ಮಾಡುವ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆದರೆ ಹೋರಾಟ ಸಮಿತಿಯ ಪ್ರಮುಖರು ಮುಖ್ಯಮಂತ್ರಿ ಭೇಟಿಗೆ ಶಾಸಕರು ವ್ಯವಸ್ಥೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ » ಭದ್ರಾವತಿಯಲ್ಲಿ ಡಬಲ್ ಮರ್ಡರ್, 25 ವರ್ಷದ ಯುವಕ, 65 ವರ್ಷದ ವ್ಯಕ್ತಿಯ ಹತ್ಯೆ, ಕಾರಣವೇನು?
ಸುದ್ದಿಗೋಷ್ಠಿಯಲ್ಲಿ ಸಾಗರ ಜಿಲ್ಲೆ ಹೋರಾಟ ಸಮಿತಿಯ ಪ್ರಮುಖರಾದ ಸುಂದರ್ ಸಿಂಗ್, ಕಾಸಿಂ ಸಾಬ್, ಜಯರಾಂ, ಅಕ್ಬರ್, ಡಿ.ಕೆ.ವೆಂಕಟೇಶ್, ಮಂಜುನಾಥ್ ಆಚಾರ್ ಸೇರಿ ಹಲವರು ಇದ್ದರು.
Sagara Bandh
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





