ಶಿವಮೊಗ್ಗ ಲೈವ್.ಕಾಂ | SAGARA NEWS | 28 MARCH 2021
ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸತತ ಎರಡು ಗಂಟೆ ಆಪರೇಷನ್ ಮಾಡಿ, 8 ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆಯಲಾಗಿದೆ.
ಮೂರನೆ ಪ್ಯಾರಾ ಈ ಜಾಹೀರಾತಿನ ಕೆಳಗಿದೆ

ಸಾಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ನಡೆಸಲಾಯಿತು. ಸೊರಬ ತಾಲೂಕಿನ 21 ವರ್ಷದ ಯುವತಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಬಂದಾಗ ಸ್ಕ್ಯಾನಿಂಗ್ ನಡೆಸಲಾಗಿತ್ತು. ಆಗ ಗಡ್ಡೆ ಇರುವುದು ಗೊತ್ತಾಗಿತ್ತು.
ಎರಡು ಗಂಟೆ ಸತತ ಆಪರೇಷನ್
ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಸಿವಿಲ್ ಸರ್ಜನ್ ಡಾ.ಪ್ರಕಾಶ್ ಬೋಸ್ಲೆ, ಸಿಬ್ಬಂದಿಗಳಾದ ರೀಟಾ, ರೋಹಿಣಿ, ಚಂದ್ರು ಸೇರಿದಂತೆ ಹಲವು ಸಿಬ್ಬಂದಿಗಳು ಅಪರೇಷನ್ ನಡೆಸಿದರು. ಸತತ ಎರಡು ಗಂಟೆ ಆಪರೇಷನ್ ನಡೆಸಿ, ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ 8 ಕೆ.ಜಿ. ತೂಕದ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ.
ಕ್ಯಾನ್ಸರ್ಗೆ ತಿರುಗುತಿತ್ತು
ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರಗೆ ತೆಗೆಯದೆ ಹೋಗಿದ್ದರೆ ಕೆಲವೇ ದಿನದಲ್ಲಿ ಅದು ಕ್ಯಾನ್ಸರ್ ರೂಪಕ್ಕೆ ಬದಲಾಗುವ ಆತಂಕವಿತ್ತು. ಸ್ವಲ್ಪ ದಿನ ಹಾಗೆ ಬಿಟ್ಟಿದ್ದರೆ ಉಸಿರಾಟದ ಸಮಸ್ಯೆಯು ಉಂಟಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com





