ಸಿಗಂದೂರು ಜಾತ್ರೆ, ಸೇತುವೆ ಉದ್ಘಾಟನೆ ನಂತರ ಮೊದಲ ಜಾತ್ರೆ, ಏನೇನು ಕಾರ್ಯಕ್ರಮ ಇರಲಿದೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಸಿಗಂದೂರಿನಲ್ಲಿ (Sigandur) ಜನವರಿ 14 ಮತ್ತು 15 ರಂದು ಸಂಕ್ರಾಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಜರುಗಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ.

ಏನೇನು ಕಾರ್ಯಕ್ರಮ ಆಯೋಜಿಸಲಾಗಿದೆ?

ಜನವರಿ 14 ರಂದು ಬೆಳಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ ನಡೆಯಲಿದೆ. 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಕ್ಕೆ 8.30ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ.

ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ ಮಾಡಲಿದೆ. 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ. ಮಧ್ಯಾಹ್ನ 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಗುರುಪೂಜೆ ನೆರವೇರಲಿದ್ದು, 6 ಗಂಟೆಗೆ ಗಂಗಾರಥಿ ನೆರವೇರಲಿದೆ.

Siganduru-Temple-Sagara

ಶಿವದೂತ ಗುಳಿಗ ನಾಟಕ ಪ್ರದರ್ಶನ

ಜನವರಿ 14 ರಂದು ಸಂಜೆ 7 ಗಂಟೆಯಿಂದ ಶಿವದೂತ ಗುಳಿಗ ನಾಟಕ ಪ್ರದರ್ಶನವಿದೆ. ಬಳಿಕ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಮತ್ತು ಎದೆತುಂಬಿ ಹಾಡುವೆನು ಸೇರಿದಂತೆ ವಿವಿಧ ಸಂಗೀತ ಶೋಗಳಲ್ಲಿ ಭಾಗಿಯಾಗಿರುವ ಹಲವು ಕಲಾವಿದರು ಭಾಗವಹಿಸಲಿದ್ದಾರೆ.

ಜನವರಿ 15 ರಂದು ಮುಂಜಾನೆಯಿಂದ ಮಹಾಭಿಷೇಕ, ಅಲಂಕಾರ, ಮಹಾಪೂಜೆ ಗುರುಪೂಜೆ, ದೇವಿ ಪಾರಾಯಣ, ಬೆಳಗ್ಗೆ 8ಕ್ಕೆ ನವಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ

ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ, ರಂಗಪೂಜೆ ನಡೆಯಲಿದೆ. ಸಂಜೆ 6 ಕ್ಕೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 7 ಗಂಟೆಯಿಂದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದಿಂದ ದೇವಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನವಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment