ಎರಡು ಬೈಕ್‌ಗೆ ಒಂದೇ ನಂಬರ್‌ ಪ್ಲೇಟ್‌, ದಂಡದ ನೊಟೀಸ್‌ ಬಂದಾಗ ವ್ಯಕ್ತಿ ಕಕ್ಕಾಬಿಕ್ಕಿ

ಸಾಗರ: ಒಂದು ಬೈಕ್‌ನ ನೋಂದಣಿ ಸಂಖ್ಯೆಯನ್ನೇ ಬಳಸಿಕೊಂಡು ಮತ್ತೊಂದು ವಾಹನ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಸಂಚರಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪೋಲೀಸ್ ಐ.ಟಿ.ಎಮ್.ಎಸ್ (ITMS) ತಂತ್ರಾಂಶದಿಂದ ಬಂದ ದಂಡದ ನೋಟಿಸ್‌ನಿಂದಾಗಿ ಈ ವಂಚನೆ ಬಯಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ರಿಪ್ಪನ್‌ಪೇಟೆಯ ಉದಯ ಎಂಬುವವರ ಹೆಸರಿನಲ್ಲಿ ಆಕ್ಟಿವಾ ಬೈಕ್ ನೋಂದಣಿಯಾಗಿದೆ. ಮೇ 3ರಂದು ಸಾಗರದ ಸಿಗಂದೂರು ರಸ್ತೆಯ ಎಸ್.ಎನ್.ಸರ್ಕಲ್ ಬಳಿ ಇದೇ ನೋಂದಣಿ ಸಂಖ್ಯೆ ಹೊಂದಿರುವ ಸುಜುಕಿ ಆಕ್ಸೆಸ್ ವಾಹನ ಸಂಚರಿಸಿದೆ. ಈ ವಾಹನವು ಸಂಚಾರ ನಿಯಮ ಉಲ್ಲಂಘಿಸಿದ್ದು ಆಟೋಮ್ಯಾಟಿಕ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆ ಉದಯ ಅವರಿಗೆ ನೊಟೀಸ್ ಬಂದಿತ್ತು.

Sagara-City-Police-Station

Sagara-City-Police-Station

ನೊಟೀಸ್‌ ಕಂಡು ಉದಯ ಆಶ್ಚರ್ಯಚಗೊಂಡಿದ್ದಾರೆ. ತಮ್ಮ ಆಕ್ಟಿವಾ ವಾಹನದ ನಂಬರ್‌ ಸುಜುಕಿ ಆಕ್ಸೆಸ್ ವಾಹನಕ್ಕೆ ಬಳಕೆಯಾಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Live Promotion

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.