ಶಿವಮೊಗ್ಗ ಲೈವ್.ಕಾಂ | TALAGUPPA NEWS | 18 JUNE 2021
ತಾಳಗುಪ್ಪ ಹೋಬಳಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ.
ರಾಷ್ಟ್ರೀಯ ಹೆದ್ದಾರಿ 206 ಇಕ್ಕೆಲೆಗಳಲ್ಲಿ ಎಲ್ಲ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ಗುಂಡಿಬೈಲು ಗದ್ದೆ ಬಯಲು ನೀರಲ್ಲಿ ಮುಳುಗಿದ್ದು ಇನ್ನೆರಡು ದಿನ ಮಳೆ ಮುಂದುವರಿದರೆ ಬಿತ್ತಿದ ಬೀಜ ಕೊಳೆಯುವ ಸಾಧ್ಯತೆ ಇದೆ.
ಮಳೆಗಾಲ ಪೂರ್ವದಲ್ಲಿ ಚರಂಡಿ ಹೂಳೆತ್ತಿಸುವ ಕಾಮಗಾರಿ ನಡೆಯದೆ, ಬೆಳ್ಳ, ರಸ್ತೆ, ಅಚಾರ್ಯ ಹೋಟೆಲ್ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗುತ್ತಿದೆ. ತಾಳಗುಪ್ಪದಲ್ಲಿ ಕಳೆದ 48 ತಾಸಿನಲ್ಲಿ 196.20 ಎಂಎಂ ಮಳೆ ಸುರಿದಿದೆ.