ಸಾಗರದಲ್ಲಿ ಅನುಮಾನಾಸ್ಪದ ವರ್ತನೆ, ವೈದ್ಯಕೀಯ ಪರೀಕ್ಷೆ ಬಳಿಕ ಮೂವರು ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SAGARA | ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಅಸಹಜ ವರ್ತನೆ ಮಾಡುತ್ತಿದ್ದ ಮೂವರು ಆರೋಪಿಗಳ (THREE ARREST) ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

Shimoga Nanjappa Hospital

ಕೇಸ್ 1 : ಸಂದೀಪ್ ಅರೆಸ್ಟ್ (THREE ARREST)

ಸಾಗರದ ಸಂದೀಪ (21) ಬಂಧಿತ. ಸೊರಬ ರಸ್ತೆಯ ಗಾರ್ಮೆಂಟ್ಸ್ ಬಳಿ ರಸ್ತೆಯಲ್ಲಿ ಸಂದೀಪ ಅಸಹಜವಾಗಿ ವರ್ತನೆ ಮಾಡುತ್ತಿದ್ದ. ಗಸ್ತಿನಲ್ಲಿದ್ದ ಪಿಎಸ್ಐ ಸಾಗರ್ ಕರ್ ಅವರು ಆತನನ್ನು ಕರೆದ ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಕುರಿತು ಅನುಮಾನ ವ್ಯಕ್ತವಾಗಿದೆ.

ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಂದೀಪನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಯಿತು. ಈ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.

ಕೇಸ್ 2 : ಸಮೀರ್ ಅರೆಸ್ಟ್ (THREE ARREST)

ಮತ್ತೊಂದೆಡೆ ಸಾಗರದ ಜೆ.ಪಿ. ನಗರದ ನಾಗ ಚೌಡೇಶ್ವರಿ ದೇವಸ್ಥಾನದ ಬಳಿ ಯುವಕನೊಬ್ಬ ಅಸಹಜವಾಗಿ ವರ್ತಿಸುತ್ತ, ಜೋರಾಗಿ ಕೂಗಾಡುತ್ತಿದ್ದ. ಆಗ ಗಸ್ತು ತಿರುಗುತ್ತಿದ್ದ ಪಿಎಸ್ಐ ಸಾಗರ್ ಕರ್ ಅವರು ಯುವಕನನ್ನು ವಿಚಾರಣೆ ನಡೆಸಿದಾಗ ಸಾಗರದ ಜೆ.ಪಿ. ನಗರ ನಿವಾಸಿ ಸಮೀರ್ ಎಂದು ತಿಳಿಸಿದ್ದಾನೆ. ಗಾಂಜಾ ಸೇವನೆ ಮಾಡಿದ ಶಂಕೆ ಮೇರೆಗೆ ಆತನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದರು. ಗಾಂಜಾ ಸೇವನೆ ದೃಢವಾದ ಹಿನ್ನೆಲೆ ಸಮೀರ್ ನನ್ನು ಬಂಧಿಸಿದ್ದಾರೆ.

ಕೇಸ್ 3 : ಮೊಹಮ್ಮದ್ ಮುಬಾರಕ್

ಸೊರಬ ರಸ್ತೆಯ ಗಡದಯ್ಯ ಲೇಔಟ್ ಬಳಿ ಯುವಕನೊಬ್ಬ ಅಸಹಜವಾಗಿ ವರ್ತಿಸುತ್ತ, ರಸ್ತೆಯಲ್ಲಿ ತೂರಾಡುತ್ತಿದ್ದ ಹೋಗುತ್ತಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಈತನ ವಿಚಾರಣೆ ಮಾಡಿದಾಗ ತನ್ನ ಹೆಸರು ಮೊಹಮ್ಮದ್ ಮುಬಾರಕ್ (24) ಎಂದು ತಿಳಿಸಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಮೂವರು ಆರೋಪಿಗಳನ್ನು ಬಂಧಿಸಿ (THREE ARREST), ಪ್ರಕರಣ ದಾಖಲು ಮಾಡಲಾಗಿದೆ. ಸಾಗರ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದರು, ವಿಚಾರಣೆ ವೇಳೆ ಅಸಲಿ ಸಂಗತಿ ಬಯಲು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment