ಹೆದ್ದಾರಿಯಲ್ಲಿ ಪಿಕಪ್‌ ವಾಹನ ಪಲ್ಟಿ, ಸಾವಿರ ಸಾವಿರ ಮೌಲ್ಯದ ಟೊಮೆಟೋ ಚೆಲ್ಲಾಪಿಲ್ಲಿ

ಸಾಗರ: ತಾಲೂಕಿನ ಉಳ್ಳೂರು ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಟೊಮೆಟೊ ಸಾಗಿಸುತ್ತಿದ್ದ ಪಿಕಪ್‌ ವಾಹನ ಪಲ್ಟಿಯಾಗಿತ್ತು. ಘಟನೆಯಲ್ಲಿ ರಾಶಿ ರಾಶಿ ಟೊಮೆಟೊ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಚಿಕ್ಕಮಗಳೂರಿನಿಂದ ಗೋವಾದ ಪಣಜಿಗೆ ಟೊಮೆಟೊ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿತ್ತು. ಇದರಿಂದಾಗಿ ಸುಮಾರು ₹40,000 ಮೌಲ್ಯದ ಟೊಮ್ಯಾಟೊ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಹಾನಿಯಾಗಿದೆ.

Sagara-Thasildhar-Dr-Prathiba-Visit-Ulluru-and-inspects-Accident-spot

ಸ್ಥಳಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಪಿಕಪ್‌ ವಾಹನದ ಚಾಲಕನ ಆರೋಗ್ಯ ವಿಚಾರಿಸಿದರು. ರಸ್ತೆಯನ್ನು ತೆರವುಗೊಳಿಸಿ ವಾಹನ ಸುಗಮವಾಗಿ ಸಾಗಲು ಅಗತ್ಯ ಸಹಾಯ ಒದಗಿಸಿದರು. ಸ್ಥಳಕ್ಕೆ ಹೆದ್ದಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.