ನಾ.ಡಿಸೋಜ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಕಾರಣ ಆ ಎರಡು ಘಟ್ಟ, ಯಾವುದದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 6 JANUARY 2025

ಸಾಗರ : ಕನ್ನಡ ಸಾಹಿತ್ಯ ಲೋಕದ ಜೀವ‘ನಾಡಿ’ ಹಿರಿಯ ಸಾಹಿತಿ (Writer) ಡಾ. ನಾ.ಡಿಸೋಜ ನಿಧನರಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಒತ್ತಡದ ಕೆಲಸದ ನಡುವೆಯು ನಾ.ಡಿಸೋಜ ಸಾಹಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಎರಡು ಪ್ರಮುಖ ಘಟ್ಟಗಳು ಕಾರಣವಾಗಿದ್ದವು.

ನಾ. ಡಿಸೋಜ ಅವರು ಹುಟ್ಟಿದ್ದು ಸಾಗರ ತಾಲೂಕಿನಲ್ಲಿ. 1937ರ ಜೂನ್ 6ರಂದು ಅವರ ಜನನವಾಯಿತು. ಡಾ. ನಾ.ಡಿಸೋಜ ಅವರ ಪೂರ್ಣ ಹೆಸರು ನಾಲ್ಬರ್ಟ್‌ ಡಿಸೋಜ. ತಂದೆ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಎಫ್‌.ಸಿ.ಡಿಸೋಜ ಅವರು ಸಾಗರದ ಚಾಮರಾಜಪೇಟೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.

writer na-dsouza-two-stages-inspired-literature.

ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 1

ತಂದೆ ಎಫ್‌.ಸಿ.ಡಿಸೋಜ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಹಲವು ಕವಿತೆಗಳನ್ನು ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದರು. ಆರು ವರ್ಷದ ನಾ.ಡಿಸೋಜ ಅವರು ಅಪ್ಪನ ಪುಸ್ತಕದಲ್ಲಿನ ಕವಿತೆಗಳನ್ನು ಓದಲು ಆರಂಭಿಸಿದರು. ‘ಇದು ತಾನು ಓದಿದ ಮೊದಲ ಪುಸ್ತಕ’ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ನಾ.ಡಿಸೋಜ ಸ್ಮರಿಸಿಕೊಂಡಿದ್ದರು.

Na-dsouza-no-more

ಇನ್ನು, ತಾಯಿ ರೂಪೀನಾ ಡಿಸೋಜ ಮಕ್ಕಳನ್ನು ಮಲಗಿಸುವಾಗ ಅನೇಕ ಜಾನಪದ ಕತೆಗಳನ್ನು ಹೇಳುತ್ತಿದ್ದರು. ಇದು ಸಾಹಿತ್ಯದ ಕುರಿತು ನಾ.ಡಿಸೋಜ ಅವರಲ್ಲಿ ಆಸಕ್ತಿ ಮೂಡಿಸಿತು.

ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 2

ನಾ.ಡಿಸೋಜ ಅವರಿಗೆ ಹತ್ತು ವರ್ಷ ಇದ್ದಾಗ ತಂದೆ ತೀರಿಕೊಂಡರು. ತಾಯಿಯ ಒಂಟಿತನ ನೀಗಿಸಲು ಅಣ್ಣ, ಅಕ್ಕಂದಿರು ಗ್ರಂಥಾಲಯದಿಂದ ಪುಸ್ತಕಗಳನ್ನು ತರುತ್ತಿದ್ದರು. ಆ ಪುಸ್ತಕಗಳನ್ನು ಓದಿ ತಾಯಿಗೆ ವಿವರಿಸಬೇಕು ಎಂದು ನಾ.ಡಿಸೋಜ ಅವರಿಗೆ ಅಕ್ಕ, ಅಣ್ಣಂದಿರು ಆದೇಶಿಸುತ್ತಿದ್ದರು. ಕತೆ, ಕಾದಂಬರಿಗಳನ್ನು ಓದಿ ತಾಯಿಗೆ ವಿವರಿಸುತ್ತಲೆ ಸಾಹಿತ್ಯದ ಪರಿಚಯವಾಯಿತು. ಅತ್ಯಂತ ಕಿರಿಯ ವಯಸ್ಸಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಶಿವರಾಮ ಕಾರಂತ ಅವರ ಕಾದಂಬರಿಗಳನ್ನು ಓದಲು ಆರಂಭಿಸಿದ್ದರು.

ಇದನ್ನೂ ಓದಿ » ನಾ.ಡಿಸೋಜ ಅಂತ್ಯಕ್ರಿಯೆ ಕುರಿತು ಪುತ್ರನ ಹೇಳಿಕೆ, ಇಲ್ಲಿದೆ ವಿಡಿಯೋ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 6, 2025

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment